ಕಾರ್ಕಳ : ನಿರಂತರ ಕಾರ್ಯಚಟುವಟಿಕೆಯೊಂದಿಗೆ ಶಾರದ ಮಹಿಳಾ ಮಂಡಲವು ಮಾದರಿ ಮಂಡಳಿಯಾಗಿ ಗುರುತಿಸಿಕೊಂಡಿದೆ. ನಿವೃತ್ತ ಮುಖ್ಯಶಿಕ್ಷಕಿ ಸಾವಿತ್ರಿ ಮನೋಹರ್ ಅವರ ನೇತೃತ್ವ ಮಂಡಳಿಯ ಸರ್ವ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಕೃಷಿ ಪಂಡಿತೆ ಪ್ರಶಸ್ತಿ ವಿಜೇತ ಮುಖ್ಯಶಿಕ್ಷಕಿ ಆಸ್ಮ ಬಾನು ಅಭಿಪ್ರಾಯಪಟ್ಟರು.
ಅವರು ಅನಂತಶಯನದಲ್ಲಿ ಶಾರದಾ ಮಹಿಳಾ ಮಂಡಲದ ವತಿಯಿಂದ ನಡೆದ ಗುರುವಂದನಾ ಕಾರ್ಯದಲ್ಲಿ ಮಾತನಾಡಿದರು. ಮಮತಾ ನಾಯಕ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸನ್ಮಾನ
ನಿವೃತ್ತ ಶಿಕ್ಷಕಿ ಸುವಾ ಸಿನಿ ಐಕೆ, ರಾಧಿಕಾ ರಾವ್, ಸಂಗೀತ ಶಿಕ್ಷಕಿ ಮಲ್ಲಿಕಾ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ ಮನೋಹರ್ ಸ್ವಾಗತಿಸಿದರು. ಶುಭ ಕೇದಿಲಾಯ ಕಾರ್ಯಕ್ರಮ ನಿರೂಪಿಸಿದರು. ಮನೋಹರರಾಯರ ಜನ್ಮದಿನದ ಅಂಗವಾಗಿ ಪೆರುವಾಜೆ ಶಾಲೆಯ 23 ಮಂದಿ ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.









































