ವಿಹಾನಾ ವಿನೂತನ -ಕುಟುಂಬ ಸಮ್ಮಿಲನ

ಕಾರ್ಕಳ : ವಿಹಾನಾ ಮೆಲೋಡಿಸ್ ಕರೋಕೆ ಗಾಯನ ತರಬೇತಿ ಸಂಸ್ಥೆಯು ಕಳೆದ ಎರಡೂವರೆ ವರ್ಷಗಳಿಂದ ಕಾರ್ಕಳ ತಾಲೂಕಿನ ಸಂಗೀತ ಆಸಕ್ತರಿಗೆ ತರಬೇತಿ ನೀಡುತ್ತಾ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದು ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಾರಾಮ್ ಕಡಂಬ ಅಭಿಪ್ರಾಯಪಟ್ಟರು.
ಅವರು ರೋಟರಿ ಬಾಲಭವನದಲ್ಲಿ ವಿಹಾನಾ ಮೆಲೋಡಿಸ್ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಮಾತನಾಡಿ, ಸಂಗೀತವು ಮನಸ್ಸಿಗೆ ಮುದ ನೀಡುವುದು. ಹಾಗೆಯೇ ವಿಹಾನಾ ಸಂಸ್ಥೆಯು ಕರೋಕೆ ತರಬೇತಿಯೊಂದಿಗೆ ಸಂಗೀತ ಆಸಕ್ತರಿಗೆ ಸಂತೋಷವನ್ನು ಉಂಟು ಮಾಡುತ್ತಿದೆ ಎಂದರು. ಜೇಸಿಐ ಕಾರ್ಕಳ ಅಧ್ಯಕ್ಷೆ ಶ್ವೇತಾ ಎಸ್. ಜೈನ್ ಸಂಸ್ಥೆಯ ಜಾಲತಾಣ ಅನಾವರಣಗೊಳಿಸಿದರು. ಕುಮಾರೇಶ್ ಕಣಿಯೂರು ಶುಭಹಾರೈಸಿದರು. ಸಂಸ್ಥೆಯ ನಿರ್ದೇಶಕರಾದ ಶಿವಕುಮಾರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಪರಪ್ಪಾಡಿ ನಿರೂಪಿಸಿದರು. ಮುಖ್ಯ ತರಬೇತಿದಾರೆ ರಮ್ಯಾ ಸುಧೀಂದ್ರ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಹಾನಾ ಮೆಲೋಡಿಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ರಸಮಂಜರಿ ಜರುಗಿತು. ವಿಹಾನಾ ಸಂಸ್ಥೆಗೆ ಸೇರಲು ಇಚ್ಚಿಸುವವರು 9743785410, 6361288299 ನಂಬರ್‌ ಸಂಪರ್ಕಿಸಬಹುದಾಗಿದೆ.









































































































error: Content is protected !!
Scroll to Top