ರಾಮಾಯಣದಲ್ಲಿ ಭಾವನಾತ್ಮಕ ಸಂಬಂಧಗಳ ನವಿರಾದ ವಿವರಣೆಯಿದೆ – ಡಾ. ರಾಘವೇಂದ್ರ ರಾವ್

ಕಾರ್ಕಳ : ಕೌಟುಂಬಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಪರಿಕಲ್ಪನೆಯಲ್ಲಿಯೂ ಮಿಳಿತಗೊಂಡಿರುವ ಭಾವನಾತ್ಮಕ ಸಂಬಂಧಗಳ ನವಿರಾದ ವಿವರಣೆಗಳನ್ನು ರಾಮಾಯಣದಲ್ಲಿ ಕಾಣಬಹುದಾಗಿದೆ. ರಾಜನಾದವನು ಪಾಲಿಸಬೇಕಾದ ರಾಜ ಧರ್ಮದ ಬಗ್ಗೆಯೂ ರಾಮನು ಭರತನಿಗೆ ಬೋಧಿಸುತ್ತಾನೆ. ರಾಜಧರ್ಮದ ಈ ವಿವರಣೆಗಳು ಇಂದಿನ ರಾಜಕಾರಣಿಗಳಿಗೂ ಅನುಕರಣೆಗೆ ಅತ್ಯಂತ ಯೋಗ್ಯವಾದುದಾಗಿದೆ ಎಂಬುದಾಗಿ ವಿದ್ವಾಂಸ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಹೇಳಿದರು.

ಅವರು ಆ. 30ರಂದು ಪ್ರಕಾಶ್ ಹೊಟೇಲ್‌ನ ಸಂಭ್ರಮ ಸಭಾಂಗಣದಲ್ಲಿ ನಡೆದ ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ನಡೆಯುವ ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲೆಯ ಅಷ್ಟಮ ಸೋಪಾನದಲ್ಲಿ ‘ಶ್ರೀರಾಮ ಸಮಾಗಮ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ, ಅ.ಭಾ.ಸಾ.ಪ.ದ ಗೌರವಾಧ್ಯಕ್ಷ ನಿತ್ಯಾನಂದ ಪೈ, ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಬಿ.ವಿ. ವಂದಿಸಿದರು.







































error: Content is protected !!
Scroll to Top