ಇಂದಿನಿಂದ ಮಳೆಗಾಲ ಅಧಿವೇಶನ ಪ್ರಾರಂಭ

ಬೆಂಗಳೂರು : ಇಂದಿನಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಆ. 22ರವರೆಗೆ ನಡೆಯಲಿದೆ. ಸರ್ಕಾರ ವರ್ಸಸ್ ವಿಪಕ್ಷಗಳ ನಡುವೆ ಮಹಾಕದನಕ್ಕೆ ಅಧಿವೇಶನ ವೇದಿಕೆಯಾಗುವ ಸಾಧ್ಯತೆ ಇದೆ.

ವಿಪಕ್ಷಗಳಿಗೆ ಸರ್ಕಾರವನ್ನ ಕಟ್ಟಿ ಹಾಕಲು ಸಾಲು ಸಾಲು ಅಸ್ತ್ರಗಳಿವೆ. ಸರ್ಕಾರದ ವೈಫಲ್ಯಗಳನ್ನ ಬಿಚ್ಚಿಟ್ಟು ಸರ್ಕಾರವನ್ನ ಎಕ್ಸ್‌ಪೋಸ್ ಮಾಡಲು ವಿಪಕ್ಷಗಳು ಸಿದ್ಧತೆ ನಡೆಸಿವೆ.

ಭಾನುವಾರ ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರಿಂದ ಸದನದಲ್ಲಿ ಹೋರಾಟದ ಬಗ್ಗೆ ಚರ್ಚೆಯ ವಿಷಯಗಳ ಪ್ರಸ್ತಾಪವಾಗಿದೆ. ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಎರಡು ಪಕ್ಷಗಳಿಂದ ಚರ್ಚೆ ನಡೆದಿದೆ ಎನ್ನಲಾಗಿದೆ. ವಿಪಕ್ಷಗಳ ಅಸ್ತ್ರಕ್ಕೆ ಪ್ರತಿ ಅಸ್ತ್ರ ಹೂಡಲು ಸರ್ಕಾರದಿಂದಲೂ ಸಿದ್ಧತೆ ನಡೆದಿದೆ.

ವಿಪಕ್ಷಗಳ ಅಸ್ತ್ರ
ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭದ ದುರಂತದಲ್ಲಿ 11 ಮಂದಿ ಅಮಾಯಕರ ಸಾವಿನ ವಿಚಾರ ಮುಂದಿಟ್ಟು ವಿಪಕ್ಷಗಳು ಮುಗಿಬೀಳುವ ಸಾಧ್ಯತೆಯಿದೆ. ಪೊಲೀಸ್ ಅಧಿಕಾರಿಗಳ ಅಮಾನತು ಹಾಗೂ ಸರ್ಕಾರದ ದ್ವಂದ್ವ ನಿರ್ಧಾರಗಳ ಬಗ್ಗೆ ಬಿಜೆಪಿ ಸಮರಕ್ಕೆ ಪ್ಲ್ಯಾನ್ ಮಾಡಿದೆ. ಇನ್ನು ರಾಜ್ಯದಲ್ಲಿ ರೈತರಿಗೆ ಯೂರಿಯಾ ಕೊರತೆ ವಿಚಾರದಲ್ಲೂ ಜಟಾಪಟಿ ನಡೆಯುವ ಸಾಧ್ಯತೆಯಿದೆ. ಗುತ್ತಿಗೆದಾರರಿಂದ 60 ಪರ್ಸೆಂಟ್ ವಸೂಲಿ ಆರೋಪ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಆರೋಪ, ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಕೇಸ್ ಸದ್ದು ಮಾಡುವ ಸಾಧ್ಯತೆಯಿದೆ.

ರಾಹುಲ್ ಗಾಂಧಿ ಮಾಡಿರುವ ‘ಮತಗಳ್ಳತನ’ ಆರೋಪ ಸಂಬಂಧ ಜಟಾಪಟಿ ನಡೆಯುವ ಸಾಧ್ಯತೆಯಿದ್ದು, ದ್ವೇಷ ಭಾಷಣ ನಿಯಂತ್ರಣ ಸಂಬಂಧ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದ್ದು ಈ ಬಗ್ಗೆಯೂ ವಾಕ್ಸಮರ ನಡೆಯುವ ಸಾಧ್ಯತೆ ಇದೆ.









































































































error: Content is protected !!
Scroll to Top