ತಾಲೂಕಿನಾದ್ಯಂತ ಬಿರುಸಿನ ಮಳೆ – ವಿವಿಧೆಡೆ ಹಾನಿ

ಮಾಳದಲ್ಲಿ ಗುಡ್ಡ ಕುಸಿತ – ಆನೆಕೆರೆಯಲ್ಲಿ ನೆಲಕ್ಕುರುಳಿದ ಮರ – ಪಳ್ಳಿಯಲ್ಲಿ ಮನೆಗೆ ಹಾನಿ

ಕಾರ್ಕಳ : ಕಾರ್ಕಳ ತಾಲೂಕಿನೆಲ್ಲೆಡೆ ಕಳೆದ ಕೆಲ ದಿನಗಳಲ್ಲಿ ಬಿರುಸಿನ ಮಳೆಯಾಗಿದ್ದು, ವಿವಿಧೆಡೆ ಮನೆಗಳಿಗೆ ಹಾನಿ, ಮತ್ತೆ ಹಲವೆಡೆ ಮರ ಬಿದ್ದು ಸಂಚಾರಕ್ಕೆ ಸಮಸ್ಯೆ, ಇನ್ನು ಹಲವೆಡೆ ಬೆಳೆಗಳಿಗೆ ಸಮಸ್ಯೆಯಾಗಿದೆ.

ಪಳ್ಳಿಯಲ್ಲಿ ಮನೆಗೆ ಬಿದ್ದ ಮರ – ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರ ಭೇಟಿ

ಮಾಳದಲ್ಲಿನ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಜರಿದಿದೆ. ಅಪಾಯ ಸಂಭವಿಸುವ ಸಾಧ್ಯತೆಯಿದ್ದು ತಕ್ಷಣವೇ ಜರಿದಿರುವ ಮಣ್ಣು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ತಾಲೂಕು ಆಡಳಿತ ಸೂಚಿಸಿದೆ.
ಜು. 24ರಂದು ಬೀಸಿದ ಗಾಳಿ ಮಳೆಗೆ ಪಳ್ಳಿ ಗ್ರಾಮದ ಕಲ್ಲೆಚ್ಚಿ ಎಂಬಲ್ಲಿ ಜಯಂತಿ ಎಂಬವರ ಮನೆಗೆ ಮರ ಬಿದ್ದು 20,000 ರೂ. ನಷ್ಟ ಸಂಭವಿಸಿದೆ. ಕಾರ್ಕಳ ಆನೆಕೆರೆಯಲ್ಲಿ ಬೃಹತ್‌ ಮರವೊಂದು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು.

ಆನೆಕೆರೆಯಲ್ಲಿ ರಸ್ತೆಗೆ ಬಿದ್ದ ಮರ

ಮಳೆ ಪ್ರಮಾಣ
ಕಾರ್ಕಳ 76.4 ಮಿ.ಮೀ., ಇರ್ವತ್ತೂರು 85.2 ಮಿ. ಮೀ., ಅಜೆಕಾರು 90.0 ಮಿ. ಮೀ., ಸಾಣೂರು 79.8 ಮಿ. ಮೀ., ಕೆದಿಂಜೆ 71.0 ಮಿ. ಮೀ., ಮುಳಿಕಾರು 97.4 ಮಿ. ಮೀ., ಕೆರ್ವಾಶೆ 102.6 ಮಳೆಯಾಗಿದ್ದು ತಾಲೂಕಿನಲ್ಲಿ 86.05 ಸರಾಸರಿ ಮಳೆಯಾಗಿದೆ.









































































































error: Content is protected !!
Scroll to Top