ಕಾರ್ಕಳ : ಸಾಹಿತ್ಯ ಸಂಘ ಕಾರ್ಕಳ ಇದರ ತಿಂಗಳ ಕಾರ್ಯಕ್ರಮದ ಅಂಗವಾಗಿ ಬುಧವಾರದಂದು ಸಂಘದ ಸದಸ್ಯರಿಂದ ಪ್ರಕಾಶ್ ಹೋಟೆಲ್‌ನ ಉತ್ಸವ ಸಭಾಂಗಣದಲ್ಲಿ ಕರ್ಮ ಬಂಧ ತಾಳಮದ್ದಳೆ ಜರಗಿತು. ಭಾಗವತರಾಗಿ ಹರಿದಾಸ ವೈ, ಅನಂತ ಪದ್ಮನಾಭ ಭಟ್, ಚೆಂಡೆ ಮದ್ದಲೆಯಲ್ಲಿ ದೇವಾನಂದ ಭಟ್, ಶ್ರೀನಿಧಿ ಆಚಾರ್ಯ, ದಿವಿಜೇಶ್ ಭಟ್, ಮುಮ್ಮೇಳದಲ್ಲಿ ಭೀಷ್ಮನಾಗಿ ಎಸ್. ರಾಮ ಭಟ್, ಅರ್ಜುನನಾಗಿ ಪ್ರೊ. ಪದ್ಮನಾಭ ಗೌಡ, ಕೃಷ್ಣನಾಗಿ ಮುನಿರಾಜ ರೆಂಜಾಳ, ಅಭಿಮನ್ಯುವಾಗಿ ಎಸ್. ನಿತ್ಯಾನಂದ ಪೈ ಅರ್ಥದಾರಿಗಳಾಗಿದ್ದರು. ಕಲಾವಿದ ಮಹಾವೀರ ಪಾಂಡಿ ಸ್ವಾಗತಿಸಿ, ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಲ ವಂದಿಸಿದರು.
ಕಾರ್ಕಳ ಸಾಹಿತ್ಯ ಸಂಘ – ತಾಳಮದ್ದಳೆ































