ಬೈಕ್‌ಗೆ ರಿಕ್ಷಾ ಡಿಕ್ಕಿ – ಸವಾರ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ಗೆ ರಿಕ್ಷಾ ಡಿಕ್ಕಿಯಾಗಿ ಸವಾರ ಆಸ್ಪತ್ರೆ ದಾಖಲಾದ ಘಟನೆ ಜು. 14ರಂದು ಮಿಯ್ಯಾರಿನಲ್ಲಿ ನಡೆದಿದೆ. ಮುಡಾರು ಗ್ರಾಮದ ಸ್ವಸ್ತಿಕ್‌ ಬೈಕ್‌ನಲ್ಲಿ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಮಿಯ್ಯಾರು ಕುಂಟಿಬೈಲು ಜಂಕ್ಷನ್‌ಲ್ಲಿ ಮುಂದುಗಡೆ ಸಾಗುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕ ಯಾವುದೇ ಸೂಚನೆಯನ್ನು ನೀಡದೆ ಬಲಕ್ಕೆ ತಿರುಗಿಸಿದ ಪರಿಣಾಮ ಸ್ವಸ್ತಿಕ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ವಸ್ತಿಕ್‌ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top