ಕಾರ್ಕಳ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 28ರಂದು ಎಳ್ಳಾರೆ ಗ್ರಾಮದಲ್ಲಿ ಸಂಭವಿಸಿದೆ. ನವೀನ್ (38) ಎಂಬವರೇ ನೇಣಿಗೆ ಶರಣಾದವರು. ಪಿತ್ತ ಖಾಯಿಲೆಯಿಂದ ಬಳಲುತಿದ್ದ ನವೀನ್ ಕುಡಿತದ ಚಟ ಹೊಂದಿದ್ದು, ಮಾನಸಿಕ ಒತ್ತಡದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ


































