ಡಿಸೇಲ್ ದರ ಏರಿಕೆ ವಿರೋಧಿಸಿ ಲಾರಿ ಮುಷ್ಕರ ಪ್ರಾರಂಭ

ಬೆಂಗಳೂರು : ಡೀಸೆಲ್‌ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಲಾರಿ ಮಾಲೀಕರು ಸೋಮವಾರ ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಕರ್ನಾಟಕ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಕರೆ ನೀಡಿರುವ ಮುಷ್ಕರಕ್ಕೆ ಕರ್ನಾಟಕ ಸರಕು ಸಾಗಾಣಿಕೆದಾರರ ಸಂಘ, ಹೊಸದಿಲ್ಲಿಯ ಎಐಎಂಟಿಸಿ, ಎಸ್‌ಐಎಂಟಿಎ, ಬಿಸಿಟಿಎ, ಕೆಜಿಟಿಎ, ಎಲ್‌ಪಿಜಿ ಟ್ಯಾಂಕರ್ಸ್, ಪೆಟ್ರೋಲ್‌ ಪಂಪ್‌ ಅಸೋಸಿಯೇಷನ್‌, ಏರ್‌ಪೋರ್ಟ್‌ ಟ್ಯಾಕ್ಸಿ ಅಸೋಸಿಯೇಷನ್‌, ಬಿಟಿಟಿಒಎ, ರಾಜ್ಯದ ಎಲ್ಲ ಜಿಲ್ಲೆಗಳ ಲಾರಿ ಮಾಲೀಕರ ಸಂಘಗಳು ಸೇರಿದಂತೆ 162 ಸಂಘಟನೆಗಳು ಬೆಂಬಲ ನೀಡಿವೆ.

ರಾಜ್ಯಾದ್ಯಂತ ಮುಷ್ಕರದ ಬಿಸಿ ಮುಟ್ಟಿದ್ದು, ಬೆಂಗಳೂರಿನಲ್ಲಿ ಲಾರಿ ಹಾಗೂ ಟ್ರಕ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಯಶವಂತಪುರದ ಟ್ರಕ್ ಟರ್ಮಿನಲ್​ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂದಿದೆ. ದಿನಸಿ, ತರಕಾರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಗಾಟ ಮಾಡುವ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ. ಹೆದ್ದಾರಿ ಹಾಗೂ ನಿಲ್ದಾಣಗಳಲ್ಲಿ ಲಾರಿ ನಿಲ್ಲಿಸಿ ಚಾಲಕರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಮೈಸೂರಿನಲ್ಲಿ ಕೂಡ ಲಾರಿ ಮತ್ತು ಗೂಡ್ಸ್ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆ ಬಳ್ಳಿ ನೂರಾರು ಲಾರಿಗಳು ನಿಂತಿವೆ. ಮಂಗಳೂರಿನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಪೆಟ್ರೋಲ್‌ ಬಂಕ್‌ ಸೇವೆ ಸ್ಥಗಿತಗೊಂಡಿದೆ.

ಲಾರಿ ಮಾಲೀಕರ ಬೇಡಿಕೆಗಳೇನು?
ರಾಜ್ಯ ಸರಕಾರ ಡೀಸೆಲ್​ ಮೇಲಿನ ತೆರಿಗೆ ಹೆಚ್ಚಳ ಆದೇಶ ಹಿಂಪಡೆಯಬೇಕು
ರಾಜ್ಯದ ಹೆದ್ದಾರಿ ಟೋಲ್​​​​ಗಳಲ್ಲಿನ ಹಣ ವಸೂಲಿ ತಡೆಯಬೇಕು
ಗಡಿಗಳಲ್ಲಿ ಆರ್​ಟಿಒ ಚೆಕ್​​ಪೋಸ್ಟ್​ಗಳನ್ನು ತೆರವು ಮಾಡಬೇಕು
ಎಫ್​ಸಿ ಫಿಟ್ನೆಸ್​ ಶುಲ್ಕ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು
ಗೂಡ್ಸ್​​​ ವಾಹನಗಳಿಗೆ ಬೆಂಗಳೂರು ಪ್ರವೇಶ ನಿರ್ಬಂಧ ಆದೇಶ ಹಿಂಪಡೆಯಬೇಕು
ಲಾರಿ ಚಾಲಕರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಬೇಕು

ಯಾವ ಸೇವೆ ಲಭ್ಯ
ಹಾಲು, ಔಷಧ, ಗೃಹ ಬಳಕೆ ಡುಗೆ ಅನಿಲ, ಹಣ್ಣು-ತರಕಾರಿ, ಮೊಟ್ಟೆ, ಆಂಬ್ಯುಲೆನ್ಸ್‌ ಹಾಗೂ ಅಗ್ನಿಶಾಮಕ ಸೇವೆ ವಾಹನ

ಯಾವೆಲ್ಲಾ ಸೇವೆ ವ್ಯತ್ಯಯ
ಎಲ್‌ಪಿಜಿ ಟ್ಯಾಂಕರ್‌, ಏರ್‌ಪೋರ್ಟ್‌ ಟ್ಯಾಕ್ಸಿ ಮತ್ತು ಸರಕು ಸಾಗಾಣಿಕೆ ವಾಹನಗಳು











































error: Content is protected !!
Scroll to Top