ತಾಲೂಕು ಬ್ರಾಹ್ಮಣ ಸಂಘ – 40ನೇ ವಾರ್ಷಿಕ ಮಹಾಸಭೆ – ಸನ್ಮಾನ

ಕಾರ್ಕಳ : ತಾಲೂಕು ಬ್ರಾಹ್ಮಣ ಸಂಘ ಕಾರ್ಕಳ ಇದರ 40ನೇ ಮಹಾಸಭೆ, ಬ್ರಾಹ್ಮಣ ಸಮ್ಮೇಳನ ಮಾ. 23ರಂದು ರಾಧಾಕೃಷ್ಣ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಮ ಭಟ್‌ ಕೋಟೆ ಮಾತನಾಡಿ, ಸಂಘಟನೆಯಿಂದ ಸಮುದಾಯ ಸದೃಢವಾಗಿ ಬೆಳೆಯುವುದು. ಪ್ರತಿಯೊಬ್ಬರೂ ಸಮಾಜಕ್ಕಾಗಿ ಅರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕೆಂದರು.

ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸೌಜನ್ಯ ಉಪಾಧ್ಯಾಯ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಇತರ ಬ್ರಾಹ್ಮಣ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು .

ಕೇಶವ ಮರಾಠೆ ಲೆಕ್ಕಪತ್ರ ಮಂಡಿಸಿದರು. ಕುಮಾರಿ ಅದಿತಿ ಕಾರಂತ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ರತ್ನಾಕರ ಮರಾಠೆ ಸ್ವಾಗತಿಸಿದರು. ರಮೇಶ್ ರಾವ್, ಶಾರ್ವರಿ ಉಪಾಧ್ಯಾಯ, ಅನುರಾಧ ಉಡುಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಬಾಲಕೃಷ್ಣ ರಾವ್ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಟಿಎಂಎ ಪೈ ರೋಟರಿ ಆಸ್ಪತ್ರೆ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ – ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಬಳಿಕ ಅನುರಾಧ ಉಡುಪ ನೇತೃತ್ವದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೌಸ್ತುಭ ರಾವ್ ವೀಣಾವಾದನ, ಶ್ರೀಕರ ನಾರಾಯಣ ವೇಣುವಾದನ ಹಾಗೂ ಅನ್ವಿತಾ ಮುಗೆರಾಯ ಭರತನಾಟ್ಯ ಪ್ರದರ್ಶನ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.











































error: Content is protected !!
Scroll to Top