ಕಾರ್ಕಳ : ಮುಡಾರು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ ಮಾ. 24ರಂದು ಶೃತಿ ಡಿ. ಅತಿಕಾರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ನ ಶೇ. 25 ನಿಧಿಯ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ಸಹಾಯಧನ, ಶೈಕ್ಷಣಿಕ ಸಹಾಯಧನ, ಹಳೆ ಮನೆ ರಿಪೇರಿಗೆ ಸಹಾಯಧನ ವಿತರಿಸಲಾಯಿತು. ನೂರಕ್ಕೂ ಅಧಿಕ ಮಂದಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಮುಡಾರು ಗ್ರಾಮದ ಅಂಬೇಡ್ಕರ್ ಸಮುದಾಯ ಮತ್ತು ಕೊರಗರ ಸಮುದಾಯ ಭವನಕ್ಕೆ ಬೇಕಾದ ಕುರ್ಚಿ, ಫ್ಯಾನ್, ಲೈಟ್ಸ್, ಸಿಂಟೆಕ್ಸ್ ಟ್ಯಾಂಕ್ ನೀಡಲಾಯಿತು.
ವಿಶೇಷ ಸಾಧನೆಗಾಗಿ ಸೃಜನಾ ಚಿಪ್ಲೂಣ್ಕರ್ ಅವರನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು. ಸಿದ್ದಪ್ಪ ತುಡುಬಿನ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲತಿ ನಾಯ್ಕ್, ಸಂತೋಷ್ ಪೂಜಾರಿ, ಸದಸ್ಯರಾದ ಸುರೇಶ್ ಶೆಟ್ಟಿ, ಶಿವ ಪ್ರಸಾದ್, ಪ್ರಶಾಂತ್ ಕುಮಾರ್, ಸರಸ್ವತಿ ಆಚಾರ್ಯ, ಅಮೃತ ಪ್ರಭು, ವಿನಯ ಡಿ. ಬಂಗೇರ, ಹರೀಶ್ ಪೂಜಾರಿ, ರಜತ್ ಆರ್. ಮೋಹನ್ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಸ್. ಸಭೆ ನಿರ್ವಹಿಸಿ, ಕಾರ್ಯದರ್ಶಿ ಜಯಕರ ವಂದಿಸಿದರು.





















