ಕಾರ್ಕಳ : ಸಾಣೂರು ದೆಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ. 23ರಿಂದ ಮೇ 5ರವರೆಗೆ ನಡೆಯಲಿದೆ. ಮಾ. 23ರಂದು ಶ್ರೀ ಕ್ಷೇತ್ರದಲ್ಲಿ ಮನವಿ ಪತ್ರ ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀರಾಮ್ ಭಟ್, 12 ದಿನಗಳ ಕಾಲ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಲಿದೆ. ಈ ಒಂದು ಪುಣ್ಯ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾತ್ ನಾಯ್ಕ್ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಪಮ್ಮನಾಡಿಗುತ್ತು, ಸ್ವಾಗತ ಸಮಿತಿ ಸಂಚಾಲಕ ಯುವರಾಜ್ ಜೈನ್, ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ್ ಪೂಜಾರಿ ಸೇಣರಬೆಟ್ಟು ಮತ್ತು ಸಾಣೂರು ನರಸಿಂಹ ಕಾಮತ್, ವಿವಿಧ ಸಮಿತಿ ಸಂಚಾಲಕರಾದ ವಿಶ್ವನಾಥ್ ಶೆಟ್ಟಿ ಭಾಮಿನಿ ಏರ್ನಡ್ಕಗುತ್ತು, ಕೊರಗ ಶೆಟ್ಟಿ ಕಾಂದೋಟ್ಟು, ಪ್ರಸಾದ್ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಸುಧಾಕರ್ ಇಂದಿರಾನಗರ, ರವಿ ಪೂಜಾರಿ, ಪುರುಷೋತ್ತಮ್ ಗೌಡ, ಜಗದೀಶ್ ಕುಮಾರ್, ಸಾಧು ನಾಯ್ಕ್, ಸುಭಾಸ್ ಪೂಜಾರಿ ಮಹೇಶ್ ಶೆಟ್ಟಿ, ರಾಜೇಶ್ ಇಂದಿರಾನಗರ, ಮಹೇಶ್ ಶೆಟ್ಟಿ, ಸದಾಶಿವ ಶೆಟ್ಟಿ ವಿವಿಧ ಸಮಿತಿಯ ಸಹ ಸಂಚಾಲಕರು ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಎಸ್. ಕೋಟ್ಯಾನ್ ಸ್ವಾಗತಿಸಿದರು. ಪ್ರಚಾರ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ನಿರೂಪಿಸಿ, ವಂದಿಸಿದರು.























