ಕಾರ್ಕಳ ತಾಲೂಕು ಅಕ್ರಮ – ಸಕ್ರಮ ಸಮಿತಿ ಸಭೆ

ಕಾರ್ಕಳ : ಕಾರ್ಕಳ ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆಯು ಮಾ. 24ರಂದು ಶಾಸಕ ವಿ. ಸುನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆಯಿತು. ಒಟ್ಟು 37 ಪ್ರಕರಣಗಳು ಅಕ್ರಮ ಸಕ್ರಮ ಸಮಿತಿ ಮುಂದೆ ಹಾಜರುಪಡಿಸಲಾಗಿದ್ದು ಅದರಲ್ಲಿ 12 ಪ್ರಕರಣಗಳಿಗೆ ಅಂತಿಮ ಮಂಜೂರಾತಿ ನೀಡಲಾಯಿತು. 18 ಹೊಸ ಪ್ರಕರಣಗಳಲ್ಲಿ ಮಂಜೂರಾತಿ ನೀಡಿ ಸಾರ್ವಜನಿಕ ಪ್ರಕಟಣೆಗೆ ಆದೇಶಿಸಲಾಯಿತು. 7 ಪ್ರಕರಣಗಳಲ್ಲಿ ಮರು ಸರ್ವೆಗೆ ಹಿಂತಿರುಗಿಸಲಾಯಿತು.
ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ, ತಹಶೀಲ್ದಾರ್‌ ಪ್ರದೀಪ್‌ ಆರ್.‌, ಸದಸ್ಯರಾದ ನವೀನ್ ದೇವಾಡಿಗ, ರಮೇಶ್ ಬಜಕಲ, ಸುನೀತಾ ಶೆಟ್ಟಿ, ಉಪತಹಶೀಲ್ದಾರ್‌ ಮಂಜುನಾಥ ನಾಯಕ್, ಕಂದಾಯ ನಿರೀಕ್ಷಕರಾದ ರಿಯಾಜ್‌ ಮಹಮ್ಮದ್‌, ಶಿವಪ್ರಸಾದ್‌, ವಿಷಯ ನಿರ್ವಾಹಕರಾದ ತಾರೇಶ್ ಹಾಗೂ ಪೂಜಾ, ಕಾರ್ಕಳ ಹೋಬಳಿ, ಅಜೆಕಾರು ಹೋಬಳಿಯ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.































error: Content is protected !!
Scroll to Top