4 ಫ್ಯಾನ್‌ ದುರಸ್ತಿಗೆ 13 ಸಾವಿರ ರೂ. – ಮಿಯ್ಯಾರು ಗ್ರಾಮ ಸಭೆಯಲ್ಲಿ ಗ್ರಾಮಸ್ಥನಿಂದ ಪ್ರಸ್ತಾಪ

ಕಾರ್ಕಳ : ಫ್ಯಾನ್‌ ದುರಸ್ತಿ ಸಂಬಂಧ ಪಿಡಿಒ ಹಾಗೂ ಮಿಯ್ಯಾರು ಗ್ರಾ.ಪಂ. ನಿಂದ ಅವ್ಯವಹಾರ ನಡೆದಿದೆ ಎಂದು ಗ್ರಾಮ ಸಭೆಯಲ್ಲಿ ರಾಜೇಶ್‌ ದೇವಾಡಿಗ ಎಂಬವರು ಆರೋಪಿಸಿರುವ ಹಿನ್ನೆಲೆಯಲ್ಲಿ ಮಿಯ್ಯಾರು ಗ್ರಾ.ಪಂ. ಅಧ್ಯಕ್ಷೆ ಸನ್ಮತಿ ನಾಯಕ್‌ ಸ್ಪಷ್ಟೀಕರಣ ನೀಡಿದ್ದಾರೆ.
ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಮಾ. 19ರಂದು ನಡೆದಿದ್ದು ಸದರಿ ಗ್ರಾಮ ಸಭೆಯಲ್ಲಿ ಪಿಡಿಓ ಹಾಗೂ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಾಗಿ ಸಾರ್ವಜನಿಕರು ಆರೋಪಿಸಿರುವ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದು ಪ್ರಶ್ನೆಗೆ ಉತ್ತರಿಸಲಾಗದೇ ಸಭೆಯನ್ನು ಮುಂದೂಡಲಾಗಿದೆ, 3 ಪ್ಯಾನ್ ದುರಸ್ತಿಗೆ 13 ಸಾವಿರ ರೂ. ಅಧಿಕ ಹಣ ವ್ಯಯಿಸಲಾಗಿದೆ ಹಾಗೂ ಅವ್ಯವಹಾರ, ಭ್ರಷ್ಟಾಚಾರ ನಡೆದಿದೆ ಎಂದು ವರದಿ ಪ್ರಕಟವಾಗಿದ್ದು ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಗ್ರಾ.ಪಂ. ಅಧ್ಯಕ್ಷೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2 ಸಾವಿರ ರೂ. ಖರ್ಚು
ಒಣ ಕಸ ತ್ಯಾಜ್ಯ ಸಂಗ್ರಹಣಾ ಘಟಕದ ವಿದ್ಯುತ್ ಸರ್ಕ್ಯೂಟ್‌ ನಿಂದಾಗಿ ಕೆಟ್ಟು ಹೋದ 4 ಫ್ಯಾನ್ ಗಳ ದುರಸ್ತಿಗೆ 2 ಸಾವಿರ ರೂ. ವ್ಯಯಿಸಿದ್ದು ಇದರ ಜೊತೆಗೆ ಕಟ್ಟಡದ ವೈರಿಂಗ್, ಸ್ವಿಚ್ ಗಳ ಪುನರ್ ಜೋಡಣೆಯ ಬಿಲ್ಲಿನ ಬಾಬ್ತು ಒಟ್ಟು 13,600 ಗಳು ಪಾವತಿ ಮಾಡಿಲಾಗಿದೆಯೇ ಹೊರತು ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿರುವುದಿಲ್ಲ ಈ ಬಗ್ಗೆ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಾಗಿರುತ್ತದೆ. ಸದರಿ ಬಿಲ್ಲಿಗೆ ಸಂಬಂಧಿಸಿದಂತೆ ಅನುಮಾನವಿದ್ದಲ್ಲಿ ಸಭೆ ಮುಗಿದ ಅನಂತರ ದಾಖಲಾತಿಯನ್ನು ಪರಿಶೀಲಿಸುವಂತೆ ತಿಳಿಸಲಾಗಿರುತ್ತದೆ.

ಕೋರಂ ಕೊರತೆಯಿಂದ ಸಭೆ ಮುಂದೂಡಿಕೆ
ಸಭೆಯಲ್ಲಿ ಕೋರಂ ಇಲ್ಲದೇ ಇರುವ ಬಗ್ಗೆ ಪ್ರಸ್ತಾಪಿಸಲಾಗಿ ಸಭೆಯನ್ನು ಮುಂದೂಡಲಾಗಿದೆಯೇ ಹೊರತು ಯಾವುದೇ ಭ್ರಷ್ಟಾಚಾರವಾಗಲೀ, ಆಡಳಿತ ವೈಫಲ್ಯವಾಗಲೀ ಇರುವುದಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top