ಮಾ. 20-25 : 11ನೇ ವರ್ಷದ ಬಿ. ಗಣಪತಿ ಪೈ ರಂಗೋತ್ಸವ : ಮಾಗಿ-ಸುಗ್ಗಿ ನಾಟಕ ಹಬ್ಬ

ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ಮತ್ತು ರಂಗಸಂಸ್ಕ್ರತಿ (ರಿ.) ಕಾರ್ಕಳ ಇದರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ 11ನೇ ವರ್ಷದ ಬಿ. ಗಣಪತಿ ಪೈ ರಂಗೋತ್ಸವ ಮಾಗಿ – ಸುಗ್ಗಿ ನಾಟಕ ಹಬ್ಬ ಮಾ. 20 ರಿಂದ 25ವರೆಗೆ ಸಂಜೆ 6.30ಕ್ಕೆ ಮಂಜುನಾಥ ಪೈ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

ಉದ್ಘಾಟನೆ
ಮಾ. 20ರಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್‌ ಉದ್ಘಾಟಿಸಲಿದ್ದಾರೆ. ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ. ಆರ್.‌ ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಲಿದ್ದು, ಯಕ್ಷರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ರಂಗಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ, ಕಸಾಪ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ ಹಾಗೂ ರಂಗಸಂಸ್ಕೃತಿ ಕಾರ್ಯದರ್ಶಿ ರಾಜೇಶ್‌ ರೆಂಜಾಳ ಉಪಸ್ಥಿತರಿರಲಿದ್ದಾರೆ.

ನಾಟಕಗಳು
ಮಾ. 20ರಂದು ಧಾರವಾಡ ರಂಗಾಯಣ ಪ್ರಸ್ತುತ ಪಡಿಸುವ ಜಿ.ಬಿ.ಜೋಷಿ ರಚನೆಯ ಹುಲುಗಪ್ಪ ಕಟ್ಟಿಮನಿ ನಿರ್ದೆಶನದ ʼಸತ್ತವರ ನೆರಳುʼ ನಾಟಕ ನಡೆಯಲಿದೆ. ಮಾ. 21 ರಂದು
ಸ್ಪಿನ್ನಿಂಗ್‌ ಟ್ರೀ ಥಿಯೇಟರ್‌ ಕಂಪನಿ (ರಿ.) ವಿಜಯಪುರ ಪ್ರಸ್ತುತಪಡಿಸುವ ಅಥೋಲ್‌ ಫುಗಾರ್ಡ್ ರಚನೆಯ ʼಅನಾಮಿಕನ ಸಾವುʼ ನಾಟಕ ನಡೆಯಲಿದ್ದು, ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಶಕೀಲ್‌ ಅಹ್ಮದ್‌ ಮಾಡಿದ್ದಾರೆ.

ಮಾ. 22ರಂದು ಭೂಮಿಕಾ (ರಿ.) ಹಾರಾಡಿ ಪ್ರಸ್ತುತಪಡಿಸುವ ʼಬರ್ಬರೀಕʼ ನಾಟಕ ನಡೆಯಲಿದ್ದು, ಈ ನಾಟಕವನ್ನು ಶಶಿರಾಜ್‌ ಕಾವೂರು ರಚಿಸಿದ್ದು, ವಿನ್ಯಾಸ ಮತ್ತು ನಿರ್ದೇಶನ ರಾಮ್‌ ಶೆಟ್ಟಿ ಹಾರಾಡಿ ಮಾಡಿದ್ದಾರೆ. ಮಾ. 23ರಂದು ಕುವೆಂಪು ವಿರಚಿತ ರಾಮಾಯಣ ದರ್ಶನಂ ಆಧರಿತ, ಭಳಿರೇ ವಿಚಿತ್ರಮ್‌ ತಂಡ ಪ್ರಸ್ತುತಪಡಿಸುವ ʼದಶಾನನ ಸ್ವಪ್ನ ಸಿದ್ಧಿʼ ನಾಟಕ ನಡೆಯಲಿದ್ದು ಮಂಜು ಕೊಡಗು ನಿರ್ದೇಶನ ಮಾಡಿದ್ದಾರೆ. ಮಾ. 24ರಂದು ಭೂಮಿಗೀತ ಸಾಂಸ್ಕ್ರತಿಕ ವೇದಿಕೆ ಪಟ್ಲ ಪ್ರಸ್ತುತಪಡಿಸುವ ʼದಿ ಫೈಯರ್ʼ‌ ನಾಟಕ ನಡೆಯಲಿದ್ದಾರೆ ಈ ನಾಟಕವನ್ನು ಎಡುವರ್ಡೋ ಗಲಿಯಾನೋ‌ ರಚಿಸಿದ್ದು, ಕೆ. ಪಿ. ಸುರೇಶ ಕನ್ನಡಕ್ಕೆ ಅನುವಾದಿಸಿದ್ದಾರೆ. ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನವನ್ನು ಸಂತೋಷ್‌ ನಾಯಕ್‌ ಪಟ್ಲ ಮಾಡಿದ್ದಾರೆ.

ಮಾ. 25ರಂದು ಭೂಮಿಕಾ (ರಿ.) ಹಾರಾಡಿ ಪ್ರಸ್ತುತಪಡಿಸುವ ʼಸೂರ್ಯಾಸ್ತದಿಂದ ಸೂರ್ಯೋದಯದವರೆಗೆʼ ನಾಟಕ ನಡೆಯಲಿದ್ದು, ಈ ನಾಟಕವನ್ನು ಸುರೇಂದ್ರ ವರ್ಮ ರಚಿಸಿದ್ದು, ಸಿದ್ಧಲಿಂಗ ಪಟ್ಟಣ ಶೆಟ್ಟಿ ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಮ್‌ ಶೆಟ್ಟಿ ಹಾರಾಡಿ ವಿನ್ಯಾಸ ಮತ್ತು ನಿರ್ದೆಶನ ಮಾಡಿದ್ದಾರೆ.

ಸಮಾರೋಪ
ಮಾ. 25ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಂಗಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದು, ಯಕ್ಷರಂಗಾಯಣ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































































































error: Content is protected !!
Scroll to Top