ಹೆಬ್ರಿ : ಪರವಾನಿಗೆ ಪಡೆದುಕೊಳ್ಳದೆ ಮೆಹಂದಿಗೆ ಡಿಜೆ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿರುವ ಕುರಿತಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಾ. 15ರಂದು ರಾತ್ರಿ ಬೆಳಂಜೆ ಗ್ರಾಮದ ಈಶ್ವರ ನಗರ ಕೃಷ್ಣ ಮೂರ್ತಿಯವರ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಯಾವುದೇ ಪರವಾನಗಿ ಇಲ್ಲದೆ ಬೆಳಂಜೆ ಗ್ರಾಮದ ಸಾಯಿ ಸೌಂಡ್ಸ್ ಅವರು ತಡ ರಾತ್ರಿಯವರಗೆ ಕರ್ಕಶವಾದ ಡಿಜೆ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿರುತ್ತಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಪರವಾನಿಗೆ ಇಲ್ಲದೆ ಮೆಹಂದಿಯಲ್ಲಿ ಡಿಜೆ – ದೂರು ದಾಖಲು































































