ಯಾರನ್ನೋ ಬಚಾವ್ ಮಾಡಲು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ – ರನ್ಯಾ ರಾವ್
ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ನಾನು ವಿಮಾನದಲ್ಲಿ ಚಿನ್ನವನ್ನು ತಂದೇ ಇಲ್ಲ ಎಂದು ದೂರು ನೀಡುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾಳೆ.
ಪರಪ್ಪನ ಅಗ್ರಹಾರ ಜೈಲರ್‌ಗೆ ದೂರು ನೀಡಿರುವ ರನ್ಯಾ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಯಾರನ್ನೋ ಬಚಾವ್ ಮಾಡಲು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾಳೆ. ನಾನು ವಿಮಾನದಲ್ಲಿ ಚಿನ್ನವನ್ನು ತಂದೇ ಇಲ್ಲ. ಈ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ. ದುಬೈನಲ್ಲಿ ನಾನು ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದೆ. ಈ ಕಾರಣಕ್ಕೆ ನಾನು ದುಬೈಗೆ ತೆರಳಿದ್ದೆ. ಮಾರ್ಚ್ 3 ರಂದು ಬೆಳಗ್ಗೆ ಹೋಗಿ ಕೆಲಸ ಮುಗಿಸಿದ ಬಳಿಕ ತಕ್ಷಣ ಮರಳಿದ್ದೇನೆ ಎಂದು ಹೇಳಿದ್ದಾಳೆ.
ಜೈಲರ್‌ಗೆ ಸಲ್ಲಿಸಿದ ದೂರನ್ನು ಪೊಲೀಸ್ ಅಧಿಕಾರಿಗಳು ಡಿಆರ್‌ಐಗೆ ವರ್ಗಾವಣೆ ಮಾಡಿದ್ದಾರೆ. ಈಗ ಡಿಆರ್‌ಐ ಅಧಿಕಾರಿಗಳು ದೂರನ್ನು ಪರಿಶೀಲನೆ ಮಾಡುತ್ತಿದ್ದಾರೆ.































































