ಶ್ರವಣ ತಪಾಸಣೆ -ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ

ಕಾರ್ಕಳ : ಬಂಡಿಮಠ ಫೌಂಡೇಶನ್ ಕಾರ್ಕಳ ಮತ್ತು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ ಮಾ. 2 ರಂದು ಅಯ್ಯಪ್ಪ ನಗರದ ವಿಜೇತ ವಿಶೇಷ ಶಾಲೆಯಲ್ಲಿ ನಡೆಯಿತು.

ಇ.ಎನ್.ಟಿ. ತಜ್ಞ ಡಾ. ಅನಂತ ಕಾಮತ್ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ಜನರಿಗೆ ತಲುಪಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಬಂಡಿಮಠ ಫೌಂಡೇಶನ್‌ನಂತ ಸಾಮಾಜಿಕ ಮನೋಭಾವವುಳ್ಳ ಸ್ಥಳೀಯ ಸಂಘ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸಿ ಅರ್ಹ ಬಡ ಜನತೆ ಉಚಿತವಾಗಿ ಸವಲತ್ತುಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತದ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ಮಾತನಾಡಿ ಬಂಡಿಮಠ ಫೌಂಡೇಶನ್ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ವೇದಿಕೆಯಲ್ಲಿ ವಿಟ್ನ ಅರ್ತ್ ಕ್ಲಿನಿಕ್‌ನ ಡಾ. ಅಂಕಿತಾ, ಶ್ರೀ ದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ, ಬಂಡಿಮಠ ಫೌಂಡೇಶನ್ ಕಾರ್ಕಳ ಇದರ ಮುಖ್ಯಸ್ಥ ರಿಜ್ವಾನ್, ಟೀಮ್ ಈಶ್ವರ್ ಮಲ್ಪೆ ಅಧ್ಯಕ್ಷ ಲವ ಕುಮಾರ್, ಹರೀಶ್ ಶೆಟ್ಟಿ ಬಂಡಿಮಠ, ಹೆಲ್ಪ್ ಲೈನ್ ಮುಖ್ಯಸ್ಥ ಮುಸ್ತಫ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಉಪಸ್ಥಿತರಿದ್ದರು. ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಸ್ವಾಗತಿಸಿ, ಶ್ವೇತ ನಿತಿನ್ ಕಾರ್ಯಕ್ರಮ ನೀರೂಪಿಸಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತದ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ ವಂದಿಸಿದರು.



























































































































error: Content is protected !!
Scroll to Top