ಕಾರ್ಕಳ : ಮೈನ್ ಶಾಲೆಗೆ ಡೆಸ್ಕ್ , ಬೆಂಚ್‌ ವಿತರಣೆ

ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್‌ಗೆ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಾಲೆಗೆ ಡೆಸ್ಕ್ ಮತ್ತು ಬೆಂಚ್‌ಗಳ ವಿತರಣಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಪುರಸಭಾ ವಾರ್ಡ್ ಮೆಂಬರ್ ಸುಮಾ ಕೇಶವ್ ವಹಿಸಿದ್ದರು.ಯೋಜನಾಧಿಕಾರಿ ಹೇಮಲತಾ, ಮೇಲ್ವಿಚಾರಕಿ ಗೀತಾ, ಪೆರ್ವಾಜೆ ಒಕ್ಕೂಟದ ಅಧ್ಯಕ್ಷೆ ಸೌಮ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಮಾಲಾಶ್ರೀ ಸಹಶಿಕ್ಷಕರಾದ ಶಿವಾನಂದ, ಅಶ್ವಿನಿ, ವಾಣಿ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶಶಿಕಲಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪದವೀಧರ ಸಹಶಿಕ್ಷಕಿ ಪ್ರತಿಮಾ ಎಸ್. ನಿರೂಪಿಸಿದರು. ಶಿಕ್ಷಕಿ ಮಧುಶ್ರೀ ವಂದಿಸಿದರು.









































































































error: Content is protected !!
Scroll to Top