ಕಾರ್ಕಳ : ಸರಕಾರದ ವಿವಿಧ ಯೋಜನೆಯಡಿ ಸಿಗುವ ಸೌಲಭ್ಯವನ್ನು ಪಡೆದು ತಮ್ಮ ಕೆಲಸದಲ್ಲಿ ಈಗ ನೀಡುವ ಉಪಕರಣಗಳನ್ನು ಉಪಯೋಗಿಸಿಕೊಳ್ಳಬೇಕು. 94C ಅಡಿ ಹಕ್ಕುಪತ್ರ ಪಡೆದವರು ಈ ಕ್ಷಣದಿಂದ ಜಾಗದ ಮಾಲೀಕರೆ ಆಗಿದ್ದು, ನಿರ್ಭೀತಿಯಿಂದ ಆ ಜಾಗದಲ್ಲಿ ವಾಸಿಸಬಹುದು ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಕಾರ್ಕಳ, ಕುಕ್ಕುಂದೂರು, ದುರ್ಗಾ, ಇರ್ವತ್ತೂರು, ಕಾಂತಾವರ, ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಸವಲತ್ತುಗಳ ಫೆ.28ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 26 ಫಲಾನುಭವಿಗಳಿಗೆ 94C/94CCಯಡಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಕಾರ್ಮಿಕ ಇಲಾಖೆಯಿಂದ 30 ಫಲಾನುಭವಿಗಳಿಗೆ ವೆಲ್ಡರ್ ಕಿಟ್, ಟೆಲ್ಸ್ ಕಿಟ್, ಇಲೆಕ್ಟ್ರಿಷಿಯನ್ ಕಿಟ್ಗಳನ್ನು ವಿತರಿಸಲಾಯಿತು. ಕುಕ್ಕುಂದೂರು ಮತ್ತು ಕಾಂತಾವರ ಗ್ರಾಮ ಪಂಚಾಯತ್ ಮೂವರು ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಣೆ ಮಾಡಲಾಯಿತು.
ಕಾರ್ಕಳ ತಹಶೀಲ್ದಾರ್ ಪ್ರದೀಪ್, ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜಿ., ಪುರಸಭೆ ಅಧ್ಯಕ್ಷ ಯೋಗಿಶ್ ದೇವಾಡಿಗ, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಉಷಾ. ಕೆ. ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಫಲಾಭವಿಗಳು ಉಪಸ್ಥಿತರಿದ್ದರು.
ಕಾರ್ಕಳ : ಫಲಾನುಭವಿಗಳಿಗೆ ಶಾಸಕರಿಂದ ಸವಲತ್ತು ವಿತರಣೆ







































