ಮೋದಿಯವರಿಗೆ 182 ಕೋ. ರೂ. ದೇಣಿಗೆ ನೀಡಲಾಗಿದೆ ಎಂಬ ಟ್ರಂಪ್‌ ಹೇಳಿಕೆಗೆ ಬಿಜೆಪಿ ಮೌನವೇಕೆ – ಬಿಪಿನ್‌ ಚಂದ್ರಪಾಲ್‌ ನಕ್ರೆ

ಕಾರ್ಕಳ : ಭಾರತದಲ್ಲಿ ಮತಪ್ರಮಾಣ ಹೆಚ್ಚಿಸಲು ಮೋದಿಯವರಿಗೆ 182ಕೋಟಿ ರೂ. ದೇಣಿಗೆ ನೀಡಲಾಗಿದೆ ಎಂಬ ಅಮೇರಿಕಾ ಅಧ್ಯಕ್ಷ ಟ್ರಂಪ್ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದೇಶದ ಪ್ರಜಾತಂತ್ರ ವ್ಯವಸ್ಥೆಯ ಘನತೆ ಗೌರವಕ್ಕೆ ದಕ್ಕೆ ತಂದಿದೆ. ಆದಾಗ್ಯೂ ಪ್ರಧಾನಿ ಮೋದಿ ಹಾಗೂ ಅವರ ಪಕ್ಷ ಈ ಬಗ್ಗೆ ಮೌನ ವಹಿಸಿರುವುದರ ಹಿಂದೆ ದೇಣಿಗೆ ದುರುಪಯೋಗದ ಸಂಶಯವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ ಚಂದ್ರಪಾಲ್‌ ನಕ್ರೆ ಹೇಳಿದ್ದಾರೆ.

ಯುಎಸ್ಏಡ್ ಭಾಗವಾಗಿ 182ಕೋಟಿ ದೇಣಿಗೆ ಬಂದಿರುವುದು ನಿಜವೇ ಆದಲ್ಲಿ ಪ್ರಧಾನಿ ಮೋದಿ ಮೌನ ಮುರಿದು ಈ ಬಗ್ಗೆ ಪೂರ್ಣ ವಿವರ ಮತ್ತು ಯಾವುದಕ್ಕೆ ವಿನಿಯೋಗಿಸಲಾಯಿತೆಂಬ ಮಾಹಿತಿ ನೀಡಲಿ. ಒಂದು ವೇಳೆ ದೇಣಿಗೆ ಬಂದಿಲ್ಲವಾದಲ್ಲಿ ಟ್ರಂಪ್ ಒಬ್ಬ ಸುಳ್ಳುಗಾರನೆಂದು ಜಾಗತೀಕ ಮಟ್ಟದಲ್ಲಿ ಘೋಷಿಸಲಿ ಎಂದ ಅವರು ಒಂದು ದೇಶದ ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತೊಂದು ದೇಶದ ದೇಣಿಗೆ ಆ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದಂತೆ. ಇದನ್ನು ವಿದೇಶಿ ಹಸ್ತಕ್ಷೇಪದ ಪಿತೂರಿ ಎಂದು ವಿಶ್ಲೇಷಿಸಬಹುದಾಗಿದೆ. ಇದು ಪ್ರಜಾತಂತ್ರಕ್ಕೆ ಅಪಾಯಕಾರಿ. ಇದು ವಿಶ್ವ ಸಂಸ್ಥೆ ಪ್ರತಿಪಾದಿಸುವ ಪ್ರಜಾತಂತ್ರ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಎಂದಿದ್ದಾರೆ.

ಕಳೆದ ಅವಧಿಯ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೇರಿಕಾದ ನೆಲದಲ್ಲಿ ನಿಂತು ಬೈಡನ್ ವಿರುದ್ದ ಟ್ರಂಪ್ ಪರ ಪ್ರಚಾರ ಮಾಡಿದ ನಮ್ಮ ಪ್ರಧಾನಿಯವರ ಅಸಮತೋಲಿತ ಅಂತಾರಾಷ್ಟ್ರೀಯ ರಾಜನೀತಿಯ ತಪ್ಪಿನ ಪರಮಾರ್ಜನೆಯನ್ನು ನಾವಿಂದು ಮಾಡಬೇಕಾಗಿ ಬಂದಿದೆ. ಅಂದಿನ ಅಧ್ಯಕ್ಷ ಬೈಡ‌ನ್ ಅವಧಿಯಲ್ಲಿ ನೀಡಲಾಗಿದೆ ಎನ್ನಲಾದ ದೇಣಿಗೆಯನ್ನೇ ಇಂದು ಇಂದಿನ ಅಧ್ಯಕ್ಷ ಟ್ರಂಪ್ ತನ್ನ ಆಪ್ತ ಮಿತ್ರ ಪ್ರಧಾನಿ ಮೋದೀಜಿಯ ವಿರುದ್ದ ಬಳಸಿ ಬಯಲು ಮಾಡಿರುವುದು ವಿಪರ್ಯಾಸವೇ ಸರಿ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top