ಟಿಪ್ಪರ್‌ ಪಲ್ಟಿ : ಚಾಲಕ ಸಾವು

ಪಳ್ಳಿ : ಟಿಪ್ಪರ್‌ ಲಾರಿ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಇಂದು ಮುಂಜಾನೆ ಶಿರ್ವದ ಬಳಿ ಸಂಭವಿಸಿದೆ. ಬೆಳ್ಳೆ ಗ್ರಾಮ ಪಂಚಾಯತ್‌ನ ಕಟ್ಟಿಂಗೇರಿ ಗಣಪನ ಕಟ್ಟೆ ತಿರುವಿನಲ್ಲಿ ಮಂಗಳವಾರ ಮುಂಜಾನೆ 4 ಗಂಟೆ ವೇಳೆಗೆ ಟಿಪ್ಪರ್‌ ಪಲ್ಟಿಯಾಗಿದೆ. ಮೃತ ಚಾಲಕನನ್ನು ಬೈಂದೂರಿನ ಸುಬ್ರಹ್ಮಣ್ಯ ಆಚಾರ್ಯ (40) ಎಂದು ಗುರುತಿಸಲಾಗಿದೆ.
ಟಿಪ್ಪರ್‌ ಬೈಂದೂರಿಗೆ ಪಳ್ಳಿಯಲ್ಲಿರುವ ಕ್ರಷರ್‌ನಿಂದ ಜಲ್ಲಿಕಲ್ಲು ಒಯ್ಯಲು ಆಗಮಿಸುತ್ತಿರುವ ವೇಳೆ ಪಲ್ಟಿಯಾಗಿದೆ ಎನ್ನಲಾಗಿದೆ. ಚಾಲಕ ಟಿಪ್ಪರ್‌ನಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ನೆರವಿನಿಂದ ಮೇಲೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋಜನವಾಗಲಿಲ್ಲ.















































































error: Content is protected !!
Scroll to Top