ಚಾರ್ಜ್‌ಗಿಟ್ಟ ಮೊಬೈಲ್‌ ಸ್ಫೋಟಗೊಂಡು ಮನೆಗೆ ಬೆಂಕಿ – ಅಪಾರ ನಷ್ಟ

ಕಾರ್ಕಳ : ಚಾರ್ಜ್‌ಗಿಟ್ಟ ಮೊಬೈಲ್‌ ಸ್ಫೋಟಗೊಂಡು ಮನೆಗೆ ಬೆಂಕಿ ತಗುಲಿದ ಘಟನೆ ಫೆ. 15ರ ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ತೆಳ್ಳಾರು ರಸ್ತೆ 11ನೆ ಕ್ರಾಸ್‌ ಮರತ್ತಪ್ಪ ಶೆಟ್ಟಿ ಕಾಲೋನಿಯ ಕಿಶೋರ್‌ ಕುಮಾರ್‌ ಶೆಟ್ಟಿ ಎಂಬವರ ಮನೆಯಲ್ಲಿ ಸಂಭವಿಸಿದೆ. 2 ಅಂತಸ್ತಿನ 6 ಬೆಡ್‌ರೂಮ್‌ಗಳನ್ನೊಳಗೊಂಡ ಮನೆ ಇದಾಗಿದ್ದು ಚಾರ್ಜ್‌ಗಿಟ್ಟ ಮೊಬೈಲ್‌ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದ್ದು ಮನೆಯ ಕೋಣೆಗಳಿಗೆಲ್ಲಾ ಬೆಂಕಿ ಆವರಿಸಿದೆ. ತಕ್ಷಣವೇ ಕಾರ್ಕಳ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಎಸಿ ಆನ್‌ ಇದ್ದ ಕಾರಣ ಬೆಂಕಿ ಮನೆ ತುಂಬೆಲ್ಲಾ ಆವರಿಸಿದ್ದು, ಪರಿಣಾಮವಾಗಿ ಟಿವಿ, ಕಿಟಕಿ, ಫ್ಯಾನ್‌, ಮೊಬೈಲ್‌, ಇಂಟಿರಿಯರ್‌, ಸೋಫಾ ಸೇರಿದಂತೆ ವಿವಿಧ ಪಿಠೋಪಕರಣಗಳು ಬೆಂಕಿಗಾಹುತಿಯಾಗಿದ್ದು 7 ಲಕ್ಷ ರೂ. ಮೌಲ್ಯದಷ್ಟು ನಷ್ಟ ಸಂಭವಿಸಿದೆ. ಈ ಅವಘಡದಲ್ಲಿ ಮನೆಯ ಮಾಲಕ 64 ವರ್ಷದ ಕಿಶೋರ್‌ ಕುಮಾರ್‌ ಶೆಟ್ಟಿಯವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್‌ ಮೊನೀಸ್‌, ಸಿಬ್ಬಂದಿ ಹರಿಪ್ರಸಾದ್‌ ಶೆಟ್ಟಿಗಾರ್‌, ಚಾಲಕರಾದ ಜಯ ಮೂಲ್ಯ ಹಾಗೂ ಭೀಮಪ್ಪ ಪಾಲ್ಗೊಂಡಿದ್ದರು.































































































































error: Content is protected !!
Scroll to Top