ಚಾಲಕನ ಮೇಲೆ ಟಿಪ್ಪರ್‌ ಮಾಲೀಕನಿಂದ ಹಲ್ಲೆ

ಕಾರ್ಕಳ : ಚಾಲಕನ ಮೇಲೆ ಟಿಪ್ಪರ್‌ ಮಾಲೀಕ ಮತ್ತು ಅವರ ಜೊತೆಗಿದ್ದ ವ್ಯಕ್ತಿ ಹಲ್ಲೆ ಮಾಡಿದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಯೋಗೀಶ್‌ ಎಂಬವರ ಟಿಪ್ಪರ್‌ನಲ್ಲಿ ಅರ್ಜುನ್‌ (28) ಚಾಲಕರಾಗಿ ದುಡಿಯುತ್ತಿದ್ದರು. ಅರ್ಜುನ್‌ಗೆ ಸಂಬಳ ಬಾಕಿಯಿಟ್ಟಿದ್ದು, ಪದೇಪದೆ ಕೇಳಿದ ಬಳಿಕ ಕಳೆದ ನವಂಬರ್‌ನಲ್ಲಿ ಅದನ್ನು ಕೊಟ್ಟಿದ್ದರು. ಫೆ. 13ರಂದು ರಾತ್ರಿ 10 ಗಂಟೆ ವೇಳೆಗೆ ಅರ್ಜುನ್‌ ಬೆಳ್ಮಣ್‌ನಲ್ಲಿರುವ ತನ್ನ ಮಾವ ಶಿವಣ್ಣ ಎಂಬವರ ಹೋಟೆಲ್‌ಗೆ ಹೋದಾಗ ಅಲ್ಲಿದ್ದ ಯೋಗೀಶ್‌ ಅವಾಚ್ಯ ಶಬ್ದಗಳಿಂದ ಬೈದು ಮುಖಕ್ಕೆ ಹೊಡೆದಿದ್ದಾನೆ. ಯೋಗೀಶ್‌ ಜೊತೆಗಿದ್ದ ಗಡ್ಡಧಾರಿ ವ್ಯಕ್ತಿ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಹೋಟೆಲ್‌ನ ಹೊರಗೂ ಹಲ್ಲೆ ಮಾಡಿ ಕಾಲಿನಿಂದ ಒದ್ದಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿರುವ ಅರ್ಜುನ್‌ ತನ್ನ ಮೇಲೆ ಹಲ್ಲೆ ನಡೆದ ಸಂದರ್ಭ ಜೇಬಿನಲ್ಲಿದ್ದ ಹಣ ಬಿದ್ದು ಹೋಗಿದೆ ಎಂದು ಸಹ ದೂರಿನಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top