ನೂರಾಲ್‌ಬೆಟ್‌ನಲ್ಲಿ ಬೇಟೆಯಾಡಲು ಬಂದಿದ್ದ ಇಬ್ಬರ ಸೆರೆ

ಕಾರ್ಕಳ : ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವನ್ಯಜೀವಿ ವಲಯದ ನೂರಾಲ್‌ಬೆಟ್ಟು ಗ್ರಾಮದ ಮೂಲಿಕಾರಪ್ಪ ಎಂಬಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಇಬ್ಬರನ್ನು ಕಾರ್ಕಳ ವನ್ಯಜೀವಿ ವಲಯದ ಸಿಬ್ಬಂದಿ ಬಂಧಿಸಿ 1 ಬಂದೂಕು 21 ಕಾಡತೂಸು 1 ಸರ್ಚ್‌ಲೈಟ್ 2 ಮೊಬೈಲ್ ಫೋನ್ ಆರೋಪಿಗಳು ಬಳಸಿದ್ದ ಕಾರು ಮತ್ತು 1 ಆಟೋರಿಕ್ಷಾ ವಶಕ್ಕೆ ಪಡೆಕೊಂಡಿದ್ದಾರೆ. ಬಂಧಿತರನ್ನು ಪ್ರಶಾಂತ್ ಪೂಜಾರಿ ಮತ್ತು ಅಶೋಕ್ ಪೂಜಾರಿ ಎಂದು ಗುರುತಿಸಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ಅವರ ನಿರ್ದೇಶನದಂತೆ, ಕುದುರೆಮುಖ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಶಶಿಧರಗೌಡ ಪಾಟೀಲ್ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದು, ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಾಜು ಎಲ್.ಜೆ, ಅಭಿಲಾಷ್ ಎಸ್.ಬಿ, ಗಸ್ತು ಅರಣ್ಯ ಪಾಲಕರಾದ ಪಕೀರಪ್ಪ, ಮಲ್ಲಯ್ಯ, ಬೇಟೆ ನಿಯಂತ್ರಣ ಕಾವಲುಗಾರರಾದ ಹರೀಶ್ ಎಂ, ನಿತಿನ್, ಅಜಿತ್ ಹಾಗೂ ವಾಹನ ಚಾಲಕರಾದ ದಾಮೋದರ, ನಿತಿನ್ ಜೆ ಹೆಡ್ಡೆ ಪಾಲ್ಗೊಂಡಿದ್ದರು.





























































































































error: Content is protected !!
Scroll to Top