ಶ್ರೀಮದ್ ಭುವನೇಂದ್ರ ಪ್ರೌಢಶಾಲೆ – ಶ್ರೀ ಸುಧೀಂದ್ರ ಕ್ರೀಡಾಂಗಣ ಉದ್ಘಾಟನೆ

ಕಾರ್ಕಳ : ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಗಳ ನೂತನ ಆಟದ ಮೈದಾನ ‘ಶ್ರೀ ಸುಧೀಂದ್ರ ಕ್ರೀಡಾಂಗಣ’ ಉದ್ಘಾಟನೆ ಜ. 20ರಂದು ನಡೆಯಿತು. ಶ್ರೀ ಕಾಶೀ ಮಠಾಧೀಶ ಪರಮ ಪೂಜ್ಯ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮಿಜಿಯವರು ಸಸಿ ನೆಡುವ ಮೂಲಕ ಕ್ರೀಡಾಂಗಣಕ್ಕೆ ಚಾಲನೆ ನೀಡಿದರು. ಬಳಿಕ ಆಶೀರ್ವನ ನೀಡಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುಕ್ತ ಶಿಕ್ಷಣ ನೀಡಿದ್ದಲ್ಲಿ ಅವರ ಭವಿಷ್ಯ ಉಜ್ವಲವಾಗುವುದು. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸಲಿ ಎಂದು ಆಶೀರ್ವಚನ ನೀಡಿದರು.
ಇದೇ ಸಂದರ್ಭ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸ್ವಾಮೀಜಿಗಳು ಪದಕ ಪ್ರದಾನ ಮಾಡಿದರು ಹಾಗೂ ಸಂಸ್ಕೃತ ಭಾಷಾ ವಿಷಯದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು. ಸಂಸ್ಥೆಯ ಅಧ್ಯಕ್ಷ ಎ. ಯೋಗೀಶ್ ಹೆಗ್ಡೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು.





























































































































error: Content is protected !!
Scroll to Top