ರಾಷ್ಟ್ರ ಮಟ್ಟದ ವಾಲಿಬಾಲ್‌ ಕ್ರೀಡಾಪಟು ದ್ರುವಿಗೆ ಅಭಿನಂದನೆ

ಕಾರ್ಕಳ : ಆಂದ್ರ ಪ್ರದೇಶದ ವಿಜಯವಾಡದಲ್ಲಿ ಆಯೋಜಿಸಿದ್ದ 68ನೇ ರಾಷ್ಟ್ರೀಯ ಶಾಲಾ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದಲ್ಲಿ ರಾಷ್ಟ್ರಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿರುವ ಕರ್ನಾಟಕದ ರಾಜ್ಯ ಬಾಲಕಿಯರ ತಂಡವನ್ನು ಪ್ರತಿನಿಧಿಸಿದ ಕಾರ್ಕಳ ಎಸ್. ಎನ್.ವಿ. ಕಾಲೇಜಿನ ವಿದ್ಯಾರ್ಥಿ ಸಾಂತ್ರಬೆಟ್ಟುವಿನ ದ್ರುವಿ ಅವರನ್ನು ಜ. 12ರಂದು ಜೋಡುರಸ್ತೆಯ ದುರ್ಗಾ ಫ್ರೆಂಡ್ಸ್ ವಾಲಿಬಾಲ್ ಕ್ರೀಡಾಂಗಣದಲ್ಲಿ ಭವ್ಯವಾದ ಸ್ವಾಗತದೊಂದಿಗೆ ಅಭಿನಂದಿಸಲಾಯಿತು.

ಕ್ರೀಡಾ ಪ್ರೋತ್ಸಾಹಕ ಶುಭದ ರಾವ್ ಅಭಿನಂದನಾ ಮಾತುಗಳನ್ನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸಿದಲ್ಲಿ ಸಾಧನೆಗೆ ಪ್ರೇರಣೆಯಗುತ್ತದೆ. ದ್ರುವಿ ಶಾಲಾ ವಿಭಾಗದ ಪಂದ್ಯದಲ್ಲಿ ರಾಷ್ಟ್ರದ ಮಟ್ಟದ ಸಾಧನೆ ಮಾಡಿದ ಕಾರ್ಕಳದ ಪ್ರಥಮ ವಿದ್ಯಾರ್ಥಿನಿ. ಅವರ ಸಾಧನೆ ಅಭಿನಂದನಾರ್ಹ ಮತ್ತು ಇನ್ನಿತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದರು.
ವಾಲಿಬಾಲ್ ತರಬೇತುದಾರರಾದ ಸಂತೋಷ್ ಡಿ’ಸೋಜ, ಜೀವನ್ ಡಿ’ ಸಿಲ್ವಾ, ಜಯರಾಜ್ ಪೂಜಾರಿ, ವೆಂಕಟೇಶ್ ಪ್ರಭು, ಕ್ರೀಡಾ ಪ್ರೋತ್ಸಾಹಕ ಸಂದೇಶ್ ವರ್ಮ, ಪ್ರತಿಮಾ ಡಿ’ಸೋಜಾ,‌ ದ್ರುವಿ ಪೋಷಕರಾದ ರಾಜೇಂದ್ರ ಪ್ರಸಾದ್ ಮತ್ತು ಪ್ರಿಯಾ ಹಾಗೂ ದುರ್ಗಾ ಪ್ರೆಂಡ್ಸ್ ತಂಡದ ಆಟಗಾರು ಉಪಸ್ಥಿತರಿದ್ದರು.

















































error: Content is protected !!
Scroll to Top