ಕಾರ್ಕಳದಲ್ಲಿ ನಂದಿ ರಥಯಾತ್ರೆ

ಕಾರ್ಕಳ : ಗೋವಿನ ಉತ್ಪನ್ನ ಬಳಕೆಯಿಂದ ಆರೋಗ್ಯ ವೃದ್ಧಿಸುವುದು. ಈ ನಿಟ್ಟಿನಲ್ಲಿ ದೇಶಿ ತಳಿಯ ಸಾಕಾಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಗೋ ಸೇವಾ ಗತಿವಿಧಿ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್‌ ಸರಳಾಯ ಅಭಿಪ್ರಾಯಪಟ್ಟರು.
ಅವರು ಜ. 10ರಂದು ಗೋ ಸೇವಾ ಗತಿವಿಧಿ ಕರ್ನಾಟಕ ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್‌ ಸಹಕಾರದಲ್ಲಿ ಮಂಜುನಾಥ ಪೈ ಸಭಾಭವನದಲ್ಲಿ ನಡೆದ ನಂದಿ ರಥಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಥಯಾತ್ರೆ
ಸಭಾ ಕಾರ್ಯಕ್ರಮಕ್ಕೂ ಮುನ್ನ ಅನಂತಶಯನದಿಂದ ಸಾಗಿದ ರಥಯಾತ್ರೆಗೆ ಶಾಸಕ ವಿ. ಸುನಿಲ್ ಕುಮಾರ್‌ ಚಾಲನೆ ನೀಡಿದರು. ರಥಯಾತ್ರೆ ಮಂಜುನಾಥ ಪೈ ಸಭಾಭವನದವರೆಗೆ ಸಾಗಿ ಬಂತು. ಯಾತ್ರೆಯಲ್ಲಿ ಚೆಂಡೆ, ಭಜನಾ ತಂಡಗಳ ಭಜನೆ ಗಮನಸೆಳೆಯಿತು. 

ವಿಷ್ಣು ಸಹಸ್ರನಾಮ ಪಠಣ
ಸಭಾ ಕಾರ್ಯಕ್ರಮಕ್ಕಿಂತ ಮೊದಲು ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಸುಮಂತ್ ಜೋಶಿ ಪಠಣ ನೆರವೇರಿಸಿದರು.
ಗೋ ಸೇವಾ ಗತಿವಿಧಿ ಕರ್ನಾಟಕ ರಾಧ ಸುರಭಿ ಗೋಮಂದಿರದ ಭಕ್ತಿಭೂಷಣ್, ರಥಯಾತ್ರೆಯ ತಾಲೂಕು ಸಂಯೋಜಕ ಉಮೇಶ್ ಸೂಡ, ಉದ್ಯಮಿ ವಿಜಯ ಶೆಟ್ಟಿ, ನ್ಯಾಯವಾದಿ ಎಂ. ಕೆ., ವಿಪುಲ್‌ ತೇಜ್‌ ಉಪಸ್ಥಿತರಿದ್ದರು. ಪ್ರಣಯ್ ನಿಟ್ಟೆ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿದರು. ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರ್ವಹಿಸಿದರು.









































































































error: Content is protected !!
Scroll to Top