ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ

ಧರ್ಮಸ್ಥಳ: ಪವಿತ್ರ ‌ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಐದು ದಿನಗಳ ಕಾಲ ನಡೆದ ಲಕ್ಷ ದೀಪೋತ್ಸವ ನಿನ್ನೆ ರಾತ್ರಿ ವೈಭವದಿಂದ ಸಂಪನ್ನಗೊಂಡಿದೆ. ಲಕ್ಷಾಂತರ ಭಕ್ತರು ದೇಗುಲಕ್ಕೆ ಆಗಮಿಸಿ ದೀಪೋತ್ಸವವನ್ನು ಕಣ್ತುಂಬಿಕೊಂಡು, ಮಂಜುನಾಥ ದೇವರ ದರ್ಶನ ಪಡೆದು ಪುನೀತರಾದರು. ಇಡೀ ಧರ್ಮಸ್ಥಳ ಜಗಮಗಿಸುವ ದೀಪಾಲಂಕಾರದಿಂದ ಬೆಳಗುತ್ತಿತ್ತು.

ಐದು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನ, ಸರ್ವಧರ್ಮ ಸಮ್ಮೇಳನ ಮುಂತಾದ ಕಾರ್ಯಕ್ರಮಗಳು ಜರುಗಿ ಜನರ ಜ್ಞಾನದ ಹಸಿವನ್ನೂ ನೀಗಿಸಿವೆ.
ಕಾರ್ತಿಕ ಮಾಸದ ಲಕ್ಷ ದೀಪದ ಸಂಭ್ರಮ ಸಡಗರ ಶ್ರೀ ಕ್ಷೇತ್ರ‌ ಧರ್ಮಸ್ಥಳದಲ್ಲಿ ಐದು ದಿ‌ನಗಳ ಕಾಲ ಮೇಳೈಸಿತ್ತು. ಧರ್ಮಸ್ಥಳ ಕ್ಷೇತ್ರ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಭಕ್ತ ಸಾಗರವೇ ಕ್ಷೇತ್ರದಲ್ಲಿ ಶಿವನ ಸ್ಮರಣೆ ಮಾಡಿದರು. ದೀಪೋತ್ಸವ ಹಿನ್ನೆಲೆ ದೇಗುಲದ ಮುಂಭಾಗವನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿಮಾರುಕಟ್ಟೆ ಉತ್ಸವ, ಗೌರಿ ಮಾರುಕಟ್ಟೆ ಉತ್ಸವದ ಜೊತೆಗೆ ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ ಹೀಗೆ ವಿವಿಧ ಸಮ್ಮೇಳನಗಳು ನಡೆದವು. ದೇವಸ್ಥಾನ, ಅನ್ನಛತ್ರ ರಾಜಬೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಐದು ದಿನಗಳ ಕಾಲ ನಡೆದ ಲಕ್ಷದೀಪೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.





























































































































error: Content is protected !!
Scroll to Top