ಚೈತ್ರಾರನ್ನು ಬಿಗ್‌ಬಾಸ್‌ನಿಂದ ಹೊರಗೆ ಕಳುಹಿಸಿ, ಇಲ್ಲದಿದ್ದರೆ…

ಬೆಂಗಳೂರು : ಈ ಸಲದ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿಗಳ ಪೈಕಿ ಹೆಚ್ಚು ಸುದ್ದಿಯಾಗುತ್ತಿರುವುದು ಚೈತ್ರಾ ಕುಂದಾಪುರ. ಎಲ್ಲರ ಗಮನ ಈಕೆಯ ಮೇಲಿದೆ. ಬಿಗ್‌ಬಾಸ್ 11 ಆರಂಭವಾಗಿ ಮೂರು ದಿನಗಳಾಗಿದ್ದು, ಈ ಬಾರಿ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ತಲುಪಿದ್ದಾರೆ. ಈಗ ಚೈತ್ರಾಗೆ ಕಾನೂನು ಸಂಕಷ್ಟ ಎದುರಾಗಿದೆ. ಚೈತ್ರಾ ಕುಂದಾಪುರ ಅವರನ್ನು ಬಿಗ್‌ಬಾಸ್‌ ಮನೆಯಿಂದ ಹೊರಗೆ ಕಳುಹಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ವಕೀಲರೊಬ್ಬರು ನೋಟಿಸ್‌ ಜಾರಿ ಮಾಡಿದ್ದಾರೆ.

ಚೈತ್ರಾ ಅವರನ್ನು ಬಿಗ್ ಬಾಸ್ ಆಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಕಲರ್ಸ್ ವಾಹಿನಿಗೆ ನೋಟೀಸ್ ಕಳುಹಿಸಲಾಗಿದೆ. ವಕೀಲ ಭೋಜರಾಜ್ ಎಂಬವರು ಚೈತ್ರಾ ಅವರನ್ನು ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರ ಕಳುಹಿಸಬೇಕು. ಇಲ್ಲವಾದರೆ ಕಲರ್ಸ್‌ ವಾಹಿನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಚೈತ್ರಾ ಕುಂದಾಪುರ ವಿರುದ್ದ ಗಲಾಟೆ, ದೊಂಬಿ, ಜೀವ ಬೆದರಿಕೆ ವಂಚನೆ ಮುಂತಾದ ಪ್ರಕರಣಗಳು ದಾಖಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವ ಬಗ್ಗೆ ನೋಟೀಸ್‌ನಲ್ಲಿ ಆಕ್ಷೇಪ ಎತ್ತಲಾಗಿದೆ.
ಚೈತ್ರಾ ಮೇಲೆ ಸಾಕಷ್ಟು ಕೇಸ್‌ಗಳಿವೆ. ಅವರನ್ನು ಸ್ಪರ್ಧಿಯಾಗಿ ಮುಂದುವರಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಕೂಡಲೇ ಅವರನ್ನು ಬಿಗ್‌ಬಾಸ್‌ನಿಂದ ಹೊರಕಳುಹಿಸುವಂತೆ ಮನವಿ ಮಾಡಲಾಗಿದೆ. ವಕೀಲ ಭೋಜರಾಜ್ ಕಲರ್ಸ್ ಕನ್ನಡಕ್ಕೆ ಬರೆದಿರುವ ಪತ್ರ ವೈರಲ್ ಆಗಿದೆ.









































































































error: Content is protected !!
Scroll to Top