ಇರಾನ್‌-ಇಸ್ರೇಲ್‌ ಸಮರ: ಬೆಂಗಳೂರಿಗೆ ಬರುತ್ತಿದ್ದ ವಿಮಾನ ಇಸ್ತಾಂಬುಲ್‌ನಲ್ಲಿ ಬಾಕಿ

ಇಸ್ತಾಂಬುಲ್‌ : ಇಸ್ರೇಲ್ ಮೇಲೆ ಇರಾನ್‌ ಕ್ಷಿಪಣಿ ಮಳೆಗರೆದು ದಾಳಿ ನಡೆಸಿದ ಪರಿಣಾಮವಾಗಿ ಬೆಂಗಳೂರಿಗೆ ಬರುತ್ತಿದ್ದ ಸುಮಾರು 300 ಪ್ರಯಾಣಿಕರು ವಿಮಾನದಲ್ಲೇ ಬಾಕಿಯಾಗಿದ್ದಾರೆ. ಸ್ವಿಜರ್‌ಲ್ಯಾಂಡ್‌ನ ರಾಜಧಾನಿ ಜ್ಯೂರಿಕ್‌ನಿಂದ ದುಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಕನ್ನಡಿಗರು ಸೇರಿ 300 ಮಂದಿ ಪ್ರಯಾಣಿಕರು ಬರುತ್ತಿದ್ದರು. ಈ ವೇಳೆ ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ.
ಕ್ಷಿಪಣಿ ದಾಳಿಯ ಬೆನ್ನಲ್ಲೇ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲಾಗಿದೆ. ವಿಮಾನದಲ್ಲಿ ಕರ್ನಾಟಕದ ಪ್ರಯಾಣಿಕರ ಜೊತೆ ಸುಮಾರು 300 ಮಂದಿ ಪ್ರಯಾಣಿಕರು ಇದ್ದಾರೆ.
ಜ್ಯೂರಿಕ್‌ ಕಾಲಮಾನ ಮಧ್ಯಾಹ್ನ 3.25ಕ್ಕೆ ಟೇಕಾಫ್‌ ಆದ ವಿಮಾನ ರಾತ್ರಿ 10 ಗಂಟೆಗೆ ದುಬೈ ತಲುಪಬೇಕಿತ್ತು. ಇರಾನ್‌ ಮತ್ತು ಇರಾಕ್‌ ವಾಯುಮಾರ್ಗ ಬಂದ್‌ ಆಗಿರುವುದರಿಂದ ಯಾವುದೇ ವಿಮಾನ ಹಾರಾಟ ನಡೆಸುತ್ತಿಲ್ಲ. ಹೀಗಾಗಿ ವಿಮಾನ ಇಸ್ತಾಂಬುಲ್‌ನಲ್ಲೇ ಬಾಕಿಯಾಗಿದೆ.









































































































error: Content is protected !!
Scroll to Top