ಜ್ಞಾನಸುಧಾ : ಜಾಂಬವತಿ ಕಲ್ಯಾಣ ತಾಳಮದ್ದಳೆ

ಯಕ್ಷೋತ್ಕರ್ಷ ಬಳಗಕ್ಕೆ ದಶಮಾನೋತ್ಸವದ ಸಂಭ್ರಮ

ಗಣಿತನಗರ : ಕಾರ್ಕಳ ಜ್ಞಾನಸುಧಾದ ಆವರಣದಲ್ಲಿರುವ ಶ್ರೀಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ, ದಶಮಾನೋತ್ಸವದ ಸಂಭ್ರಮದಲ್ಲಿರುವ ಹವ್ಯಾಸಿ ಯಕ್ಷಗಾನ ಕಲಾವಿದರ ಸಂಗಮವಾಗಿರುವ ಜ್ಞಾನಸುಧಾದ ಯಕ್ಷೋತ್ಕರ್ಷ ಬಳಗದಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಳೆ ಜರುಗಿತು.

ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನ ಭೌತಶಾಸ್ತ್ರ ಉಪನ್ಯಾಸಕ ಗೋಪಾಲಕೃಷ್ಣ ಗೋರೆಯವರ ನಿರ್ದೇಶನದಲ್ಲಿ ಜರುಗಿದ ಜಾಂಬವತಿ ಕಲ್ಯಾಣ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಬೈಲೂರು ಸ.ಪ.ಪೂ.ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕ ಸೀತಾರಾಮ್ ಭಟ್ ಬೈಲೂರು, ಮದ್ದಳೆಯಲ್ಲಿ, ಯಕ್ಷೋತ್ಕರ್ಷದ ತರಬೇತುದಾರ, ಆನಂದ್ ಗುಡಿಗಾರ್ ಕೆರ್ವಾಶೆ, ಚೆಂಡೆಯಲ್ಲಿ ಶ್ರೀನಿಧಿ ಆಚಾರ್, ಚಕ್ರತಾಳದಲ್ಲಿ ರಂಜಿತ್ ಪಾಟ್ಕರ್ ಸಹಕರಿಸಿದರು.

ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಶ್ರೀರಾಮನ ಪಾತ್ರದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಶ್ರೀಕೃಷ್ಣನಾಗಿ ಗೋಪಾಲ ಕೃಷ್ಣ ಗೋರೆ, ಬಲರಾಮನಾಗಿ ಮುನಿಯಾಲು ಸ.ಪ.ಪೂ.ಕಾಲೇಜಿನ ಗಣಿತ ಉಪನ್ಯಾಸಕ ಅನಿಲ್ ಕುಮಾರ್, ಸತ್ರಾರ್ಜಿತನ ಪಾತ್ರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಜಾಂಬವಂತನ ಪಾತ್ರದಲ್ಲಿ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಹಾಗೂ ಯಕ್ಷೋತ್ಕರ್ಷದ ನಿರ್ವಾಹಕಿ ಸಂಗೀತಾ ಕುಲಾಲ್, ಜಾಂಬವತಿಯಾಗಿ ಗಣಿತ ಶಿಕ್ಷಕಿ ಕು. ಆಜ್ಞಾ ಸೋಹಂ, ನಾರದನಾಗಿ ಸಂಸ್ಥೆಯ ನಿರ್ವಹಣಾ ವಿಭಾಗದ ಶೇಖರ್ ಶೆಟ್ಟಿ, ಪ್ರಸೇನನ ಪಾತ್ರದಲ್ಲಿ ಗಣಿತ ಉಪನ್ಯಾಸಕ ಶ್ರೇಯಾನ್ ಜೈನ್ ಮಿಂಚಿದ್ದರು.











































































error: Content is protected !!
Scroll to Top