ತಾಲೂಕಿನಲ್ಲಿ 10 ಆದರ್ಶ ಶಾಲೆಗಳ ನಿರ್ಮಾಣವಾಗಲಿ – ಸುನಿಲ್ ಕುಮಾರ್ ಆಶಯ
ಕಾರ್ಕಳ : ತಾಲೂಕಿನ 10 ಸರಕಾರಿ ಶಾಲೆಗಳನ್ನು ಗುರುತಿಸಿ ರಾಜ್ಯಕ್ಕೆ ಮಾದರಿ ಎಂಬಂತೆ ಆದರ್ಶ ಶಾಲೆಗಳಾಗಿ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ವಿವಿಧ ಸಂಘಗಳು ಕಾರ್ಯೋನ್ಮುಖವಾಗಬೇಕಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ಅವರು ಸೆ. 5ರಂದು ಕಾರ್ಕಳ ಹಾಗೂ ಹೆಬ್ರಿ ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಕಾರ್ಕಳ ಹಿರಿಯಂಗಡಿ ಮಹಾವೀರ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಕ್ತಿ ನಿರ್ಮಾಣದ ಅಗತ್ಯತೆ
ಗುರುವಿನ ಪ್ರೇರಣೆಯಿಂದ ಸಾವಿರಾರು ಮಂದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುತ್ತಾರೆ. ಸಾಮ್ರಾಜ್ಯವನ್ನೇ ಕಟ್ಟಿರುತ್ತಾರೆ. ಪ್ರಸ್ತುತ ಶಿಕ್ಷಕರಿಗೆ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಬೇಕಾದ ಸವಾಲುಗಳಿಲ್ಲ. ಬದಲಾಗಿ ವ್ಯಕ್ತಿ ನಿರ್ಮಾಣದ ಅಗತ್ಯತೆಯಿದೆ. ವ್ಯಕ್ತಿ ನಿರ್ಮಾಣ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪರೀಕ್ಷೆಗಿಂತ ವ್ಯಕ್ತಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಸೋಲು ಕಲಿಸಿ
ಸಮಾಜದಲ್ಲಿ ಇಂದು ಗೆಲುವಿನ ಪೈಪೋಟಿಯಿದೆ. ಆದರೆ, ಗೆಲುವಿನ ಓಟದ ನಡುವೆ ಮಕ್ಕಳಿಗೆ ಸೋಲುವುದನ್ನು ಕಲಿಸಬೇಕಿದೆ. ಮಕ್ಕಳು ಸೋಲುವುದನ್ನು ಕಲಿಯದಿದ್ದರೆ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಸೋಲಿನ ಅನುಭವವೇ ಗೆಲುವಿಗೆ ದಾರಿ. ಹೀಗಾಗಿ ಶಿಕ್ಷಕರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಬೇಕೆಂದು ಸುನಿಲ್ ಕುಮಾರ್ ಸಲಹೆ ನೀಡಿದರು.
ಶಿಕ್ಷಕರು ನೀರಿನ ಮಿತವಾದ ಬಳಕೆ, ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ದೇಶದ ಮೊದಲ ಎಂಆರ್‌ಎಫ್ ಘಟಕ ನಿಟ್ಟೆಯಲ್ಲಿದೆ. ಶಿಕ್ಷಕರು ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋದಲ್ಲಿ ತ್ಯಾಜ್ಯ ವಿಲೇವಾರಿಯ ಮಾಹಿತಿ ಎಳವೆಯಲ್ಲೇ ದೊರೆಯುವಂತಾಗಿ ಪರಿಸರದ ಕುರಿತು ಕಾಳಜಿ ಮೈಗೂಡಿಸಿದಂತಾಗಲಿದೆ ಎಂದರು.

ನಿವೃತ್ತ ಶಿಕ್ಷಕರಿಗೆ ಸನ್ಮಾನ
ನಿವೃತ್ತ ಶಿಕ್ಷಕರಾದ ಕೈರಬೆಟ್ಟು ಸ. ಹಿ. ಪ್ರಾ. ಶಾಲೆಯ ರಘುನಾಥ ರಾವ್ ಎನ್. ಆರ್., ಪರಪ್ಪಾಡಿ ನಿಟ್ಟೆ ಸ. ಹಿ. ಪ್ರಾ. ಶಾಲೆಯ ಕುಸುಮ ಜೆ., ಕಲ್ಲಂಬಾಡಿ ಪದವು ಸ. ಹಿ. ಪ್ರಾ. ಶಾಲೆಯ ಪ್ರೇಮಾ ಕೆ., ದಾದಬೆಟ್ಟು ಸ. ಹಿ. ಪ್ರಾ. ಶಾಲೆಯ ಜಯಂತಿ, ಕಲ್ಲಗುಪ್ಪೆ ಸ. ಹಿ. ಪ್ರಾ. ಶಾಲೆಯ ಯು. ಜಿ. ಶಾಲಿನಿ, ಅಂಡಾರು ಸ. ಹಿ. ಪ್ರಾ. ಶಾಲೆಯ ವಿಜಯ ಕುಮಾರಿ, ಚಾರ ಸ. ಹಿ. ಪ್ರಾ. ಶಾಲೆಯ ಅಮ್ಮಣ್ಣಿ, ಕುಕ್ಕಜೆ ಸ. ಹಿ. ಪ್ರಾ. ಶಾಲೆಯ ಮೀರಾ, ಹೆಬ್ರಿ ಸ. ಹಿ. ಪ್ರಾ. ಶಾಲೆಯ ವಿಶ್ವನಾಥ ಎಸ್. ಆರ್., ಗಾಂಧಿನಗರ ಸ. ಹಿ. ಪ್ರಾ. ಶಾಲೆಯ ರೇವತಿ ಶೆಡ್ತಿ, ಮುನಿಯಾಲು ಸ. ಹಿ. ಪ್ರಾ. ಶಾಲೆ (ಕೆ.ಪಿ.ಎಸ್.)ಯ ಈಶ್ವರಪ್ಪ ಡಿ., ಪಲಾಯಿಬಾಕ್ಯಾರು ಸ. ಕಿ. ಪ್ರಾ. ಶಾಲೆಯ ಶಕುಂತಳಾ ಆಚಾರ್, ಪೆರ್ವಾಜೆ ಸ. ಹಿ. ಪ್ರಾ. ಶಾಲೆಯ ಶೋಭಾ, ಸ.ಪ.ಪೂ.ಕಾಲೇಜು ಪಳ್ಳಿ (ಪ್ರೌಢಶಾಲಾ ವಿಭಾಗದ) ಆನಂದ ಶೆಟ್ಟಿ, ನಂದಳಿಕೆ ಸ. ಹಿ. ಪ್ರಾ. ಶಾಲೆಯ ಸದಾನಂದ ಶೆಟ್ಟಿ, ಅಂಬರಾಡಿ ಸ. ಕಿ. ಪ್ರಾ. ಶಾಲೆಯ ಉಮಾ ಕುಮಾರಿ, ಅಯ್ಯಪ್ಪನಗರ ಸ. ಹಿ. ಪ್ರಾ. ಶಾಲೆಯ ಪ್ರಭಾವತಿ ಅಮೀನ್, ಸಾಲ್ಮಾರ ಉರ್ದು ಸ. ಹಿ. ಪ್ರಾ. ಶಾಲೆಯ ಕುಸುಮ, ಬೆದ್ರಲ್ಕೆ ಸ. ಹಿ. ಪ್ರಾ. ಶಾಲೆಯ ಕ್ರಿಸ್ತಿನ ಡೊರತಿ ರೊಬೊಲ್ಲೊ, ಬೆಳ್ಮಣ್ಣು ಹೊಸ್ಮಾರು ಸ. ಹಿ. ಪ್ರಾ. ಶಾಲೆಯ ಕಲಾವತಿ, ಎಣ್ಣೆಹೊಳೆ ಸ. ಹಿ. ಪ್ರಾ. ಶಾಲೆಯ ಪ್ರಭಾವತಿ ನಾಯಕ್, ದಾಸಗದ್ದೆ ಸ. ಕಿ. ಪ್ರಾ. ಶಾಲೆಯ ದೇವೆಂದ್ರ ಇಂದ್ರ, ಎಸ್.ವಿ.ಟಿ.ಅ.ಹಿ. ಪ್ರಾ. ಶಾಲೆಯ ಎಮ್. ಜಾನಕೀನಾಥ ರಾವ್, ಕುಕ್ಕುಂದೂರು ಶ್ರೀ ದುರ್ಗಾದೇವಿ ಅ. ಹಿ. ಪ್ರಾ. ಶಾಲೆಯ ಆರ್ನಾರ್ಧನ ಸಾ ಕೃಷ್ಣ ಸಾ ಬದಿ, ಮುಂಡ್ಕೂರು ಸಂಗಮ ಪೋಸ್ರಾಲು ಅ. ಹಿ. ಪ್ರಾ ಶಾಲೆಯ ಶಂಕರಪ್ಪ ಭೀಮಪ್ಪ, ನೂರಾಲ್‌ಬೆಟ್ಟು ಶ್ರೀ ಚಂದ್ರನಾಥ ಅ. ಹಿ. ಪ್ರಾ ಶಾಲೆಯ ಶಕುಂತಳಾ, ಕಾಂತವಾರ ಶ್ರೀ ಕಾಂತೇಶ್ವರ ಅ. ಪ್ರೌಢ ಶಾಲೆಯ ಹರಿಣಿ ಕೆ., ಹೆಕ್ಕಡ್ಕ ಸ. ಹಿ. ಪ್ರಾ. ಶಾಲೆಯ ಎಲಿಜಾ ಫೆರ್ನಾಂಡಿಸ್, ಬೈಲೂರ್ ಮೂನ್ ಸ. ಹಿ. ಪ್ರಾ. ಶಾಲೆಯ ಉಮೇಶ್ ನಾಯಕ್, ದಾದಬೆಟ್ಟು ಸ. ಹಿ. ಪ್ರಾ. ಶಾಲೆ ಶಾಂತಿ ಕ್ಲೇರಾ ಸೆರಾವೋ, ಬೆಳ್ಮಣ್ಣು ಸಂತ ಜೊಸೆಫ್‌ನ ಹರಿದಾಸ ಪ್ರಭು, ಅತ್ತೂರು ಸಂತ ಲಾರೆನ್ಸ್‌ನ ಶ್ರೀನಿವಾಸ ಆಚಾರ್ಯ, ಕಲ್ಯಾ ಸ. ಪ್ರೌ. ಶಾಲೆಯ ಸುಮನ ಭಟ್, ಕುಚ್ಚೂರು ಸ. ಪ್ರೌ.ಶಾಲೆಯ ಸ್ನೇಹಲತಾ, ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ವೃಂದಾ ಶೆಣೈ, ಹಿರಿಯಂಗಡಿ ಎಸ್.ಎನ್.ವಿ. ಪ್ರೌಢ ಶಾಲೆಯ ಇಚ್ಚಾದೇವಿ, ಕಾಬೆಟ್ಟು ಸ. ಪ್ರೌ. ಶಾಲೆಯ ವಸಂತಿ ವೈ ಅವರನ್ನು ಸನ್ಮಾನಿಸಲಾಯಿತು.

ಅಭಿನಂದನೆ
ಶಾಲಾ ಆವರಣದಲ್ಲಿ ಆಯುರ್ವೇದ ಗಿಡಗಳನ್ನೊಳಗೊಂಡ ಧನ್ವಂತರಿ ವನ ನಿರ್ಮಿಸಿದ ನಲ್ಲೂರು ಸ. ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕ ನಾಗೇಶ್ ನಲ್ಲೂರು ಹಾಗೂ ಶಿಕ್ಷಕ ವೃಂದದವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭ ಸಂಯೋಜಕರಾದ ಬಾಲಕೃಷ್ಣ ಮತ್ತು ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಅಜೆಕಾರು ಪಿಎಸ್‌ಐ ರವಿ ಬಿ. ಕೆ., ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕ. ರಾ. ಸ. ನೌ. ಸಂಘ ಕಾರ್ಕಳ ತಾಲೂಕು ಅಧ್ಯಕ್ಷ ಭಾಲಕೃಷ್ಣ ಎನ್., ಹೆಬ್ರಿ ತಾಲೂಕು ಅಧ್ಯಕ್ಷ ಹರೀಶ್ ಪೂಜಾರಿ, ಕಾರ್ಕಳ ತಾಲೂಕು ಪ್ರೌ. ಶಾ. ಮು. ಶಿ. ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಕ. ರಾ. ಪ್ರಾ. ಶಾ. ಶಿ. ಸಂ. ಕಾರ್ಕಳ ಅಧ್ಯಕ್ಷ ರಮಾನಂದ ಶೆಟ್ಟಿ, ಕ. ರಾ. ಪ್ರಾ ಶಾ. ಮು. ಶಿ. ಸಂ. ಕಾರ್ಕಕ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್, ಕ. ರಾ. ಪ್ರೌ. ಶಾ. ಸ. ಶಿ. ಸಂ. ಕಾರ್ಕಳ ಅಧ್ಯಕ್ಷ ಮಹೇಶ್, ಕ. ರಾ. ಅ. ಶಿ. ಸಂ. ಕಾರ್ಕಳ ಅಧ್ಯಕ್ಷ ಪೃಥ್ವಿರಾಜ್ ಬಳ್ಳಾಲ್, ತಾ. ಪ್ರಾ. ಶಾ. ದೈ. ಶಿ. ಸಂ. ಕಾರ್ಕಳ ಅಧ್ಯಕ್ಷ ಪಾಂಡುರಂಗ ಆಚಾರ್, ತಾ. ಪ್ರೌ. ಶಾ. ದೈ. ಶಿ. ಸಂ. ಕಾರ್ಕಳ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾ. ತಾ. ಸ. ಗ್ರೇಡ್-1 ದೈಹಿಕ ಶಿಕ್ಷಕರ ಸಂಘ ಕಾರ್ಕಳ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಬಿ.ಎ. ಸ್ವಾಗತಿಸಿದರು. ಶಿಕ್ಷಕರಾದ ಪ್ರವೀಣ್ ಶೆಟ್ಟಿ ಹಾಗೂ ಗೀತಾ ಕಾರ್ಯಕ್ರಮ ನಿರೂಪಿಸಿದರು. ಪ್ರಿತೇಶ್, ಪ್ರೇಮ ಕುಮಾರಿ, ಜ್ಯೋತಿ, ಮಮತಾ ಹಾಗೂ ರಾಘವೇಂದ್ರ ಆಚಾರ್ ಸನ್ಮಾನಿತರ ಪತ್ರ ವಾಚಿಸಿದರು. ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘ ಕಾರ್ಕಳ ತಾಲೂಕು ಅಧ್ಯಕ್ಷ ಭಾಸ್ಕರ್ ಟಿ. ವಂದಿಸಿದರು.


ಚಿತ್ರ : ಆರುಷ್






























































