ಬೆಳ್ಮಣ್ : ಕುಂಭನಿಧಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಮಹಾಸಭೆ ಭಾನುವಾರ ಮುಂಡ್ಕೂರು ನಾನಿಲ್ತಾರ್ ಕುಲಾಲ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಜಯರಾಮ್ ಕುಲಾಲ್ ಅಗರಟ್ಟ ಕಾರ್ಯಕ್ರಮ ಉದ್ಘಾಟಿಸಿ ಕುಂಭನಿಧಿ ಸೊಸೈಟಿಯ ಇನ್ನೂ ಕೆಲವು ಶಾಖೆಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯ ಪ್ರವರ್ತಕ ಕುಶ ಆರ್. ಮೂಲ್ಯ ಸೊಸೈಟಿಗೆ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.
ಗೋಪಾಲ್ ಮೂಲ್ಯ ಮಡಿಕೆ 2024-25 ಸಾಲಿನ ಆಯವ್ಯಯ ಮಂಡಿಸಿ ಸೊಸೈಟಿ ಸ್ಥಾಪನೆ 20 ವರ್ಷದ ಹಿಂದಿನ ಕನಸು ಎಂದರು. ನೋಂದಣಿ ಪ್ರಮಾಣಪತ್ರವನ್ನು ದೀಪಕ್ ಬೆಳ್ಮಣ್ ಓದಿದರು. ಸಂಘದ ಮಾಜಿ ಅಧ್ಯಕ್ಷ ಮಂಜಪ್ಪ ಮೂಲ್ಯ, ಪ್ರವರ್ತಕರಾದ ಬೊಗ್ಗು ಮೂಲ್ಯ ಬೇಲಾಡಿ, ಉಮೇಶ್ ಕುಲಾಲ್ ಬೆಳ್ಳಿಬೆಟ್ಟು, ಅಶೋಕ್ ಕುಲಾಲ ಮುಂಡ್ಕೂರು, ರಾಜೇಶ್ ಕುಲಾಲ್ ಸಾಂತೂರ್, ಗಣೇಶ್ ಕುಲಾಲ ಬೋಳ, ಸುಗಂಧಿ ಬೋಳ, ಶಂಕರ್ ಕುಲಾಲ್ ಇನ್ನ, ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್, ಕಾಂತಾವರ ಕುಲಾಲ ಸಂಘದ ಅಧ್ಯಕ್ಷ ವಿಠಲ್ ಮೂಲ್ಯ ಬೇಲಾಡಿ ಉಪಸ್ಥಿತರಿದ್ದರು. ಸುಧಾಕರ್ ಕುಲಾಲ್ ಪ್ರಾರ್ಥಸಿದರು, ರಮಾನಂದ ಮೂಲ್ಯ ಬೆಳ್ಮಣ್ ಸ್ವಾಗತಿಸಿ, ಶಿಕ್ಷಕ ಶ್ರೀಕಾಂತ್ ನಿರೂಪಿಸಿ, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ ಶ್ರೀಧರ್ ವಂದಿಸಿದರು.
ಕುಂಭನಿಧಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಮಹಾಸಭೆ






























































