ಕಾರ್ಕಳ : ಶಿಕ್ಷಣ ಇಲಾಖೆಯ ವತಿಯಿಂದ ಎಸ್.ವಿ.ಟಿ. ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಎಸ್. ವಿ. ಟಿ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಶೃತಿ, ಅನ್ವಿತಾ, ಪ್ರೇಕ್ಷಾ, ಭಾರತಿ, ಪ್ರಣೀತ್, ರಿತಿಕ್, ಸಿದ್ಧಲಿಂಗ, ಮುತ್ತುರಾಜ್, ಪೂಜಾ ಕೆ., ವಾಣಿ ಸಂಗಪ್ಪ, ವಿಘ್ನೇಶ್, ದಿವ್ಯಶ್ರೀ ಮತ್ತು ಸಾನ್ವಿ ಸೇರಿದಂತೆ ಒಟ್ಟು 13 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯ ನೇಮಿರಾಜ್ ಶೆಟ್ಟಿ, ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಿಯಾ ಪ್ರಭು, ಪ್ರಭಾವತಿ ಹಾಗೂ ಕಾಲೇಜು ಸಿಬ್ಬಂದಿ ಅಭಿನಂದಿಸಿದ್ದಾರೆ.
ಕುಸ್ತಿ ಪಂದ್ಯಾಟ : ಎಸ್. ವಿ. ಟಿ. ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
























