ಮಡಿಕೇರಿ: ಆನೆಯೊಂದು ತರಕಾರಿ ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ತರಕಾರಿಯನ್ನು ತಿಂದು ತೇಗಿದ ಘಟನೆ ನಿನ್ನೆ ರಾತ್ರಿ ಕೊಡಗಿನ ಚೌಕೂರು ಬಳಿ ಸಂಭವಿಸಿದೆ.
ಮೈಸೂರಿನಿಂದ ತರಕಾರಿ ತುಂಬಿದ ಲಾರಿಯೊಂದು ಆನೆಚೌಕೂರು, ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿತ್ತು. ರಾತ್ರಿ 10.45ರ ಸುಮಾರಿಗೆ ಆನೆ ಚೌಕೂರು ಬಳಿ ಲಾರಿಗೆ ಅಡ್ಡಲಾಗಿ ಬಂದ ಒಂಟಿ ಸಲಗ ವಾಹನದ ಹಿಂಭಾಗಕ್ಕೆ ತೆರಳಿ ಟಾರ್ಪಲ್ ಎಳೆದು ವಿವಿಧ ತರಕಾರಿಗಳನ್ನ ಎಳೆದು ರಸ್ತೆಗೆ ಹಾಕಿದೆ. ಬಳಿಕ ಸುಮಾರು ಅರ್ಧಗಂಟೆ ಕಾಲ ತಿಂದು ತೇಗಿ ತೆರಳಿದೆ.
ಅರಣ್ಯಾಧಿಕಾರಿಗಳ ವಸತಿ ಗೃಹ ಅಲ್ಲೇ ಸಮೀಪದಲ್ಲೇ ಇದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ. ಲಾರಿ ಚಾಲಕ ಉಳಿದ ತರಕಾರಿ ತೆಗೆದುಕೊಂಡು ಕೇರಳ ತೆರಳಿದ್ದಾರೆ ಎನ್ನಲಾಗಿದೆ. ತರಕಾರಿ ಲಾರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಲಾರಿ ಅಡ್ಡಗಟ್ಟಿ ತರಕಾರಿ ಎಳೆದು ಹಾಕಿ ತಿಂದು ತೇಗಿದ ಗಜರಾಜ































