ಪೈಂಟ್ಸ್‌ ಉದ್ಯಮಿ ವಿಪುಲ್‌ ನಿಧನ

ಕಾರ್ಕಳ : ಪೈಂಟ್ಸ್‌ ಉದ್ಯಮಿ ವಿಪುಲ್‌ ಜಿ. ಕಿಣಿ (48) ಜೂ. 28ರಂದು ನಿಧನರಾದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಉಡುಪಿ ಟಿಎಂಪೈ ರೋಟರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಬಲ್ಲು ಎಂದೇ ಸ್ನೇಹಿತರಿಂದ ಕರೆಯಲ್ಪಡುತ್ತಿದ್ದ ಇವರು ಕಾರ್ಕಳದ ಎಸ್‌.ಜೆ. ಆರ್ಕೆಡ್‌ನಲ್ಲಿ ಶಾಂತೇರಿ ಪೈಂಟ್ಸ್‌ ಸಂಸ್ಥೆ ನಡೆಸುತ್ತಿದ್ದರು. ಜಿಎಸ್‌ಬಿ ಸಮುದಾಯ ಸೇರಿದಂತೆ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.











































































error: Content is protected !!
Scroll to Top