ಗಾಳಿ ಮಳೆಗೆ ಕಾರ್ಕಳದ ವಿವಿಧೆಡೆ ಅಪಾರ ಹಾನಿ

ಕಾರ್ಕಳ : ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಬುಧವಾರಂದು ದಿನವಿಡೀ ನಿರಂತರವಾಗಿ ಗಾಳಿ ಮಳೆಯಾಗಿದೆ. ಗಾಳಿ ಮಳೆಗೆ ಈದು ಗ್ರಾಮದ ರತ್ನ ದೇವಾಡಿಗ ಎಂಬವರ ಮನೆಯ ಗೋಡೆ ಭಾಗಶ: ಕುಸಿದು ಬಿದ್ದು, ಅಂದಾಜು 15 ಸಾವಿರ ರೂ. ನಷ್ಟ ಸಂಭವಿಸಿದೆ. ಎಳ್ಳಾರೆ ಗ್ರಾಮದ ಸುಮತಿ ನಾಯ್ಕ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪರಿಣಾಮ ಅಂದಾಜು 30 ಸಾವಿರ ರೂ. ನಷ್ಟ ಸಂಭವಿಸಿದೆ. ಗುರುವಾರ ಸುರಿದ ಮಳೆಗೆ ಕಾರ್ಕಳ ತಾಲೂಕು ಕಚೇರಿಯ ಸಬ್‌ರಿಜಿಸ್ಟ್ರೇಷನ್‌ ಆಫೀಸ್‌ ಹಿಂಭಾಗದಲ್ಲಿ ಮರ ಬಿದ್ದು ಆವರಣ ಗೋಡೆ ಕುಸಿದಿದೆ. ನೀರೆ ಬೈಲೂರಿನ ಮೀನು ಮಾರುಕಟ್ಟೆಗೆ ಮರ ಬಿದ್ದು, ವ್ಯಾಪಾರಿಗಳಿಬ್ಬರು ಆಸ್ಪತ್ರೆ ದಾಖಲಾಗಿದ್ದಾರೆ. ಅನಂತಶಯನದಲ್ಲಿ ಅನಂತ ಭಟ್‌ ಎಂಬವರ ಮನೆಗೆ ತೆಂಗಿನ ಮರ ಬಿದ್ದಿದೆ.

ಮಳೆ ಪ್ರಮಾಣ
ಕಾರ್ಕಳ ನಗರದಲ್ಲಿ 171. 2 ಮಿ. ಮೀ. ಮಳೆಯಾಗಿದ್ದರೆ, ಇರ್ವತ್ತೂರಿನಲ್ಲಿ 176. 4 ಮಿ. ಮೀ., ಕೆದಿಂಜೆಯಲ್ಲಿ 162.8 ಮಿ. ಮೀ., ಅಜೆಕಾರು 154. 2 ಮಿ. ಮೀ., ಸಾಣೂರು 195. 8 ಮಿ. ಮೀ., ಕೆರ್ವಾಶೆ 149. 2 ಮಿ. ಮೀ., ಮುಳಿಕಾರು 191. 2 ಮಿ. ಮೀ. ಪ್ರಮಾಣದಲ್ಲಿ ಮಳೆಯಾಗಿದೆ.









































error: Content is protected !!
Scroll to Top