ಉತ್ತರ ಪ್ರದೇಶದಲ್ಲಿ ಲೆಕ್ಕಾಚಾರಗಳೆಲ್ಲ ಬುಡಮೇಲು

ಹೊಸದಿಲ್ಲಿ : ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಎನಿಸುವುದು 80 ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ. ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶ ಬಿಜೆಪಿಗೆ ಬಹಳ ಸುಲಭದ ತುತ್ತು ಎಂದೇ ಭಾವಿಸಲಾಗಿತ್ತು. ಆದರೆ ಆರಂಭಿಕ ಟ್ರೆಂಡ್‌ ಮಾತ್ರ ಉತ್ತರ ಪ್ರದೇಶದ ಮಟ್ಟಿಗೆ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. 80ರ ಪೈಕಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಮುಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 35 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 2 ಕ್ಷೇತ್ರಗಳಲ್ಲಿ ಇತರರು ಮುಂದಿದ್ದಾರೆ. 11.30ರ ತನಕದ ಟ್ರೆಂಡ್‌ ಎನ್‌ಡಿಎಗೆ ಭಾರಿ ಆಘಾತ ನೀಡಿದೆ. ಇದೇ ಟ್ರೆಂಡ್‌ ಮುಂದುವರಿದರೆ ಅದು ಈ ಚುನಾವಣೆಯ ಬಲುದೊಡ್ಡ ಅಚ್ಚರಿ ಎನಿಸಿಕೊಳ್ಳಲಿದೆ.































































































































error: Content is protected !!
Scroll to Top