ಹೆಬ್ರಿ : ಟೆಲಿಫೋನ್‌ ಕೇಬಲ್‌ ಕಳವು

ಹೆಬ್ರಿ : ಕಳ್ತೂರು ಗ್ರಾಮದ ಸಂತೆಕಟ್ಟೆ ಜಂಕ್ಷನಲ್ಲಿ ಒಂದು ಟೆಲಿಪೋನ್‌ ಕಂಬದಿಂದ ಇನ್ನೊಂದು ಟೆಲಿಫೋನ್‌ ಕಂಬಕ್ಕೆ ಅಳವಡಿಸಿದ ಸುಮಾರು 10 ಫೇರ್‌ ಟೆಲಿಫೋನ್‌ ಕೇಬಲನ್ನು ಜೂ. 3ರಂದು ಬೆಳಿಗ್ಗೆ 10.30 ರಿಂದ 11 ಗಂಟೆಯ ನಡುವೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಕೇಬಲ್‌ನ ಮೌಲ್ಯ 8,000 ರೂಪಾಯಿ ಆಗಿರುತ್ತದೆ. ಹೆಬ್ರಿಯ ಜೂನಿಯರ್‌ ಟೆಲಿಕಾಂ ಆಫೀಸರ್ ನವೀನ್‌ ಕುಮಾರ್ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top