‌ಟ್ರಾನ್ಸ್‌ಫಾರ್ಮರ್‌ಗೆ ಲಾರಿ ಡಿಕ್ಕಿ – 1,50,000 ರೂ. ಹಾನಿ

ಕಾರ್ಕಳ : ಟ್ರಾನ್ಸ್‌ಫಾರ್ಮರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 1,50,000 ರೂ. ನಷ್ಟವುಂಟಾದ ಘಟನೆ ಜೂ. 2ರಂದು ಹೊಸ್ಮಾರಿನಲ್ಲಿ ಸಂಭವಿಸಿದೆ.
ನಲ್ಲೂರು ಗ್ರಾಮದ ಹರಿಯಪ್ಪನಕೆರೆ ಎಂಬಲ್ಲಿ ಹಾದುಹೋಗಿರುವ ಕಾರ್ಕಳ ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿಯನ್ನು ಅದರ ಚಾಲಕ ಬಜಗೊಳಿ ಕಡೆಯಿಂದ ಹೊಸ್ಮಾರು ಕಡೆಗೆ ಸಾಗುವಾಗ ತೀರಾ ಬಲಭಾಗಕ್ಕೆ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ಮೆಸ್ಕಾಂ ಇಲಾಖೆಯಿಂದ ಅಳವಡಿಸಲಾಗಿದ್ದ ಜೋಡಿಕಂಬದ 63 KV ಪರಿವರ್ತಕಕ್ಕೆ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಲಾರಿ ಹಾಗು ವಿದ್ಯುತ್ ಪರಿವರ್ತಕವು ಜಖಂಗೊಂಡಿದ್ದು, 1.50.000 ರೂ. ಹಾನಿಯಾಗಿದೆ. ಮೆಸ್ಕಾಂನ ಹೊಸ್ಮಾರು ಶಾಖಾಧಿಕಾರಿ ವಸಂತ ಕೆ. ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top