ಒಂದೇ ಕುಟುಂಬದ ಮೂವರ ಸಾವಿಗೆ ಮತಾಂತರ ಕಾರಣ?

ಬೆಂಗಳೂರು: ಕೊಪ್ಪಳ ಜಿಲ್ಲೆಯ ಹೊಸಲಂಗಾಪುರ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಲು ಮತಾಂತರ ಕಾರಣ ಎಂಬ ಆರೋಪ ಕೇಳಿಬಂದಿದೆ.
ಮೃತರನ್ನು ರಾಮೇಶ್ವರಿ (50), ಅವರ ಮಗಳು ವಸಂತಾ (32) ಮತ್ತು ಮೊಮ್ಮಗ ಸಾಯಿಧರ್ಮತೇಜ (5) ಎಂದು ಗುರುತಿಸಲಾಗಿದೆ. ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ವಸಂತಾ ಅವರ ಪತಿ ಆರೀಫ್ ತಲೆಮರೆಸಿಕೊಂಡಿದ್ದಾನೆ.
ರಾಮೇಶ್ವರಿ ಮತ್ತು ವಸಂತಾ ಸೋಮವಾರ ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸದಿದ್ದಾಗ, ಗಾಬರಿಗೊಂಡ ಸಂಬಂಧಿಕರು ಮನೆಗೆ ಹೋಗಿ ನೋಡಿದಾಗ ಮೂವರೂ ಸಾವನ್ನಪ್ಪಿದ್ದಾರೆ. ರಾಮೇಶ್ವರಿ ಮತ್ತು ಸಾಯಿಧರ್ಮತೇಜ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಸಂತಾ ದೇಹ ಅಡುಗೆ ಕೋಣೆಯಲ್ಲಿ ಬಿದ್ದಿತ್ತು.

ಎರಡು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟ ವಸಂತಾ ತನ್ನ ಸಹೋದ್ಯೋಗಿ ಆರಿಫ್‌ನನ್ನು ಮದುವೆಯಾಗಿದ್ದಳು. ಆರೀಫ್ ಮೂವರನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಒತ್ತಾಯಿಸುತ್ತಿದ್ದ ಎಂದು ವಸಂತಾ ಅವರ ಸಂಬಂಧಿಕರು ಆರೋಪಿಸಿದ್ದಾರೆ. ವಸಂತಾ ಮತ್ತು ಆಕೆಯ ತಾಯಿ ಮತಾಂತರವಾಗಲು ನಿರಾಕರಿಸುತ್ತಿದ್ದುದರಿಂದ ಗಂಡ ಹೆಂಡತಿ ನಡುವೆ ಪದೇಪದೆ ಜಗಳವಾಗುತ್ತಿತ್ತು. ತಿಂಗಳ ಹಿಂದೆ ಮಾತುಕತೆ ನಡೆಸಿ ಆರೀಫ್ ಹಾಗೂ ವಸಂತಾ ನಡುವಿನ ಸಮಸ್ಯೆ ಬಗೆಹರಿದಿತ್ತು. ಆದರೆ ಈ ವಿಚಾರ ಬಹಿರಂಗವಾದ ನಂತರ ವಸಂತಾ ಖಿನ್ನತೆಗೆ ಜಾರಿದ್ದರು. ವಿವಾಹವಾದ ಮೂರು ತಿಂಗಳಲ್ಲೆ ನಂತರ ಆರೀಫ್ ವಸಂತಾಳನ್ನು ಇಸ್ಲಾಂಗೆ ಮತಾಂತರಿಸುವಂತೆ ಒತ್ತಾಯಿಸಲು ಪ್ರಾರಂಭಿಸಿದ್ದ ಎಂದು ಸಂಬಂಧಿಕರು ಮುನಿರಾಬಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರಿಫ್‌ ಚಿತ್ರಹಿಂಸೆ ನೀಡುತ್ತಿದ್ದ ಬಗ್ಗೆ ವಸಂತಾ ನಮಗೆ ತಿಳಿಸಿದ್ದಾಳೆ. ತನ್ನ ಸಮುದಾಯದವರ ಒತ್ತಡದಿಂದ ಆಕೆಯನ್ನು ಮತಾಂತರಗೊಳಿಸುವಂತೆ ಒತ್ತಾಯಿಸುತ್ತಿದ್ದ. ಒಂದು ತಿಂಗಳ ಹಿಂದೆ ಕುಟುಂಬ ಸದಸ್ಯರ ಸಭೆ ನಡೆಸಿದ್ದೆವು, ವಸಂತಾಳನ್ನು ಮತಾಂತರ ಮಾಡುವಂತೆ ಒತ್ತಾಯಿಸುವುದಿಲ್ಲ ಎಂದು ಆರಿಫ್ ಭರವಸೆ ನೀಡಿದ್ದ ಎಂದು ವಸಂತ ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ.





























































































































error: Content is protected !!
Scroll to Top