ಕಾರ್ಕಳ : ಓಮಿನಿ ಕಾರು ಮತ್ತು ರಿಕ್ಷಾ ಮುಖಾಮುಖಿ ಡಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ಮೇ 23ರಂದು ನಿಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ಮೋಹನ್ ಎಂಬವರು ಓಮಿನಿ ಕಾರಿನಲ್ಲಿ ಪಡುಬಿದ್ರೆ ಕಡೆಯಿಂದ ಮಾಳ ಕಡೆಗೆ ಸಾಗುತ್ತಿರುವಾಗ ನಿಟ್ಟೆ ಗ್ರಾಮದ ದೂಪದಕಟ್ಟೆ ಜಂಕ್ಷನ್ ಬಳಿ ಹುಸೇನ್ ನೌಶದ್ ಎಂಬವರು ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಆಟೋ ರಿಕ್ಷಾ ಓಮಿನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎರಡು ವಾಹನ ಜಖಂಗೊಂಡಿದ್ದು, ಓಮಿನಿಯಲ್ಲಿದ್ದ ಮೋಹನ್ ಮತ್ತು ಅವರ ಹೆಂಡತಿ ಸುನಂದ ಗಾಯಗೊಂಡಿದ್ದಾರೆ. ಆಟೋ ಚಾಲಕ ಹುಸೇನ್ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶಾಹಿದ, ರಷೀದಾ ಮತ್ತು ಇಬ್ಬರು ಮಕ್ಕಳಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಮೋಹನ್ ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಿಟ್ಟೆ : ಓಮಿನಿ ಕಾರು-ರಿಕ್ಷಾ ಮುಖಾಮುಖಿ ಡಿಕ್ಕಿ






























































