ಶಾಲೆಯ ಆವರಣ ಗೋಡೆ ಕುಸಿದು ವಿದ್ಯಾರ್ಥಿನಿ ಸಾವು

ಮಂಗಳೂರು: ಪದ್ಮಶ್ರೀ ಹರೇಕಳ ಹಾಜಬ್ಬ ನಿರ್ಮಿಸಿದ್ದ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ‌ಉಳ್ಳಾಲ ತಾಲೂಕಿನ ನ್ಯೂಪಡ್ಪುನಲ್ಲಿ ಈ ಘಟನೆ ನಡೆದಿದ್ದು, ಹರೇಕಳ ಹಾಜಬ್ಬ ಅವರು ನಿರ್ಮಿಸಿದ್ದ ಶಾಲೆಯ ಕಾಪೌಂಡ್ ಗೋಡೆ ಕುಸಿದು 7 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ಎಂಬವರ ಪುತ್ರಿ ಶಾಜಿಯಾ (7) ಎಂದು ಗುರುತಿಸಲಾಗಿದೆ. ಹಾಜಬ್ಬರ ಶಾಲೆಯಲ್ಲಿ ವಿದ್ಯಾರ್ಥಿನಿ ಶಾಜಿಯಾ 3ನೇ ತರಗತಿಐಲ್ಲಿ ಕಲಿಯುತ್ತಿದ್ದಳು.
ಶಾಲೆಯಲ್ಲಿ ನಡೆಯುತ್ತಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿ ಗೇಟಿನ ಬಳಿ ಆಟವಾಡುತ್ತಿದ್ದಾಗ ಕಾಂಪೌಡ್ ಗೋಡೆ ಕುಸಿದಿದೆ. ಈವೇಳೆ ಗೋಡೆಯಡಿ ಸಿಲುಕಿದ ಶಾಜಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಇನ್ನು ಸ್ಥಳೀಯರ ಪ್ರಕಾರ ಮಳೆಯಿಂದಾಗಿ ಶಾಲೆಯ ಕಾಂಪೌಂಡ್ ಗೋಡೆ ಶಿಥಿಲವಾಗಿತ್ತು. ರಾತ್ರಿಯಿಡೀ ಸಾಕಷ್ಟು ಮಳೆಯಾಗಿತ್ತು ಮತ್ತು ಶಾಲಾ ಗೇಟ್ ಮತ್ತು ಕಾಂಪೌಂಡ್‌ಗೆ ಸಪೋರ್ಟ್ ಆಗಿ ಇದ್ದ ಎರಡೂ ಪಿಲ್ಲರ್‌ಗಳ ಅಡಿಪಾಯ ದುರ್ಬಲಗೊಂಡಿತ್ತು. ಇದನ್ನು ದುರಸ್ತಿ ಮಾಡಿಸುವ ಮೊದಲೇ ಅನಾಹುತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







































































error: Content is protected !!
Scroll to Top