ಸಿಎಎ ಅಡಿಯಲ್ಲಿ 14 ಮಂದಿಗೆ ಭಾರತೀಯ ಪೌರತ್ವ

ಹೊಸದಿಲ್ಲಿ : ಪೌರತ್ವ ತಿದ್ದುಪಡಿ ಕಾಯಿದೆಯ (ಸಿಎಎ) ಅಡಿಯಲ್ಲಿ 14 ಮಂದಿಗೆ ಪೌರತ್ವ ಪ್ರಮಾಣಪತ್ರವನ್ನು ನೀಡಲಾಗಿದ್ದು, ಈ ಮೂಲಕ ದೇಶದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಈ ಕಾಯಿದೆ ಕಾರ್ಯರೂಪಕ್ಕೆ ಬಂದಂತಾಗಿದೆ.
ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ಥಾನಗಳಲ್ಲಿ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಹಿಂದುಗಳು ಸೇರಿದಂತೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಭಾರತೀಯ ಪೌರತ್ವ ನೀಡಲು ರೂಪಿಸಿದ ಸಿಎಎ ಬಗ್ಗೆ ಕಾಂಗ್ರೆಸ್‌ ಸಹಿತ ವಿರೋಧ ಪಕ್ಷಗಳು ಈಗಲೂ ವಿರೋಧ ವ್ಯಕ್ತಪಡಿಸುತ್ತಿವೆ. ಇದರ ಮಧ್ಯೆ ಕೇಂದ್ರ ಗೃಹ ಸಚಿವಾಲಯ 14 ಮಂದಿಗೆ ನಿನ್ನೆ ಪೌರತ್ವ ಪ್ರಮಾಣಪತ್ರ ನೀಡುವ ಮೂಲಕ ಕಾಯಿದೆಯನ್ನು ಅಧಿಕೃತವಾಗಿ ಕಾರ್ಯರೂಪಕ್ಕೆ ತಂದಿದೆ.
ಸಿಎಎ ಜಾರಿ ಕುರಿತು ಕಳೆದ ಮಾರ್ಚ್‌ 11ರಂದು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆ ಬಳಿಕ ಹಲವರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 14 ಮಂದಿಗೆ ಮೊದಲ ಹಂತದಲ್ಲಿ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದಾರೆ.
ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದ ಹಿಂದುಗಳು, ಸಿಕ್ಖರು, ಜೈನರು, ಪಾರ್ಸಿ, ಬೌದ್ಧರು ಮತ್ತು ಕ್ರೈಸ್ತರು ಈ ಕಾಯಿದೆಯಡಿ ಭಾರತದ ಪೌರತ್ವ ಪಡೆದುಕೊಳ್ಳಬಹುದು.































































































































error: Content is protected !!
Scroll to Top