ಕಾರ್ಕಳ : ರಾಮಕ್ಷತ್ರಿಯ ಸಂಘ ಕಾರ್ಕಳ ಇದರ ವತಿಯಿಂದ ಏ. 17 ರಂದು ಬಂಡಿಮಠದಲ್ಲಿರುವ ಶ್ರೀ ರಾಮ ಸಭಾಭವನದಲ್ಲಿ ಶ್ರೀ ರಾಮ ನವಮಿ ಆಚರಣೆ ನಡೆಯಿತು. ಅಶೋಕ್ ಕುಮಾರ್ ಕೆ. ಎಸ್. ಜೋಡುರಸ್ತೆ ದಂಪತಿ ಪೂಜಾ ವಿಧಿ ವಿದಾನ ನೆರವೇರಿಸಿದರು. ಬಳಿಕ ರಾಮಕ್ಷತ್ರಿಯ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ರಾಮಕ್ಷತ್ರಿಯ ಸಂಘ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರು ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಈ ಸಂದರ್ಭ ರಾಮನ ಕುರಿತು ಉಪನ್ಯಾಸ ನೀಡಿದ ಭುವನೇಂದ್ರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸಂಜಯ್ ಕುಮಾರ್, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ವ್ಯಕ್ತಿತ್ವ ಸಮಸ್ತ ಸಮಾಜ ಒಪ್ಪುವಂತಹದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬನು ರಾಮನ ಆದರ್ಶಗಳನ್ನು ಪಾಲಿಸುವಂತಾವರಾಗಬೇಕು ಎಂದರು.
ಮುಂಬೈ ಶ್ರೀ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಕಾರ್ಕಳ ಮೂಲದ ರವೀಂದ್ರನಾಥ್ ನೀರೆ ಹಾಗೂ ನಿವೃತ್ತ ಎಎಸ್‌ಐ ಸದಾಶಿವ ಕೆ. ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷರಾದ ಪಾರ್ಥಸಾರಥಿ, ಪ್ರಸನ್ನ ಕೆ. ಬಿ., ಉಪಾಧ್ಯಕ್ಷರಾದ ಅಂಬಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹೇಶ ರಾವ್ ಬೈಲೂರು ಸ್ವಾಗತಿಸಿ, ವಿಜೇತ ರಾಣಿ ಅಂಡಾರು ಕಾರ್ಯಕ್ರಮ ನಿರೂಪಿಸಿದರು. ಸುಕೇಶ್ ರಾವ್ ಬೈಲೂರು ವಂದಿಸಿದರು.




































