ಕಾರ್ಕಳ : ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆದಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ವೃತ್ತಿಪರ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳಿಗೆ ಅನೇಕ ತರಹದ ಉದ್ಯೋಗದ ಅವಕಾಶಗಳನ್ನು ಪಡೆಯಲು ಸಾಧ್ಯ ಎಂದು ಮಣಿಪಾಲ ಕೌಶಲ ಅಭಿವ್ರದ್ದಿ ಕೇಂದ್ರದ ನಿರ್ದೇಶಕ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಾಬ್ಲ ಹೇಳಿದರು.
ಅವರು ಶಿರ್ಡಿ ಸಾಯಿ ಪದವಿ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ಮಣಿಪಾಲ ಕೌಶಲ ಅಭಿವೃದ್ದಿ ಕೇಂದ್ರದ ಸಹಯೋಗದೊಂದಿಗೆ ನಡೆದ ಒಡಂಬಡಿಕೆ ಪತ್ರದ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ರಿಜಿಸ್ಟ್ರಾರ್ ಮಣಿಪಾಲ್ ಕೌಶಲ ಅಭಿವ್ರದ್ದಿ ಕೇಂದ್ರದ ಡಾ. ನಾರಾಯಣ ಶೆಣೈ, ಮಣಿಪಾಲ ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎನ್. ಕಾಂತರಾಜ್, ಶಿರ್ಡಿ ಸಾಯಿ ಪದವಿ ಕಾಲೇಜಿನ ಅಧ್ಯಕ್ಷ ಅಭಿಷೇಕ್ ಸುವರ್ಣ, ಟ್ರಸ್ಟಿ ಡಾ. ಪೂಜಾ ರಾಣಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶೀಶ್ ಶೆಟ್ಟಿ, ಪ್ರಾಂಶುಪಾಲೆ ಸೌಮ್ಯಶ್ರೀ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರ – ಶಿರ್ಡಿ ಸಾಯಿ ಪದವಿ ಕಾಲೇಜು ಒಡಂಬಡಿಕೆ



































