ಕಾರ್ಕಳ : ಉಡುಪಿ ಜಿಲ್ಲಾ ಪಂಜ ಕುಸ್ತಿ ಸಂಘ ಕಾರ್ಕಳ ಮತ್ತು ಫ್ರೆಂಡ್ಸ್ ಪವರ್ ಜಿಮ್ ಜೋಡುರಸ್ತೆ ಇವರ ಆಶ್ರಯದಲ್ಲಿ ರಾಜ್ಯಮಟ್ಟದ ಪಂಜ ಕುಸ್ತಿ ಚ್ಯಾಂಪಿಯನ್ ಶಿಪ್ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಏ. 11ರಂದು ನಡೆಯಿತು.
ಉಡುಪಿ ಜಿಲ್ಲಾ ಪಂಜ ಕುಸ್ತಿ ಸಂಘದ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಆಲಿ ಮಾತನಾಡಿ, ಕಾರ್ಕಳದಲ್ಲಿ ಇದೇ ಮೊದಲ ಬಾರಿಗೆ 2019ರಲ್ಲಿ ರಾಜ್ಯ ಮೊದಲ ಪಂಜ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಿ ಕರ್ನಾಟಕದಲ್ಲಿಯೇ ಎಲ್ಲರ ಹೆಗ್ಗಳಿಕೆಗೆ ಪಾತ್ರರಾಗಿರುವ ಉಡುಪಿ ಜಿಲ್ಲಾ ಪಂಜ ಕುಸ್ತಿ ಸಂಘವು 2024ನೇ ಸಾಲಿನ ರಾಜ್ಯಮಟ್ಟದ ಪಂಜ ಕುಸ್ತಿಯು ಮೇ.12ರಂದು ಭಾನುವಾರ ನಡೆಯಲಿದ್ದು, ಚಲನಚಿತ್ರ ತಾರೆಯರಾದ ಪ್ರವೀಣ್ ದಬ್ಬಾಸ್ ಮತ್ತು ಪ್ರೀತಿ ಜಂಗಿಯಾನಿ ಭಾಗವಹಿಸಲಿದ್ದು, ಬಂಡೀಮಠದಿಂದ ಮೆರವಣಿಗೆಯ ಮೂಲಕ ಅವರನ್ನು ಕರೆತರಲಾಗುವುದು ಎಂದರು.
ಬಂಡೀಮಠದಿಂದ ರಾಮಸಭಾ ಭವನದವರೆಗೆ ಮೆರವಣಿಗೆಯಲ್ಲಿ ಆಕರ್ಷಣೆಯಾಗಿ ಕಂಬಳದ ಕೋಣಗಳು, ಯಕ್ಷಗಾನ ವೇಷಧಾರಿಗಳು, ಪಂಜಕುಸ್ತಿಪಟುಗಳು ಪಾಲ್ಗೊಳ್ಳಲಿರುವರು. ಮೇ.12ರಂದು ಬೆಳಿಗ್ಗೆ 10ಗಂಟೆಗೆ ಉದ್ಘಾಟನಾ ಶ್ರೀ ರಾಮಸಭಾಭವನದಲ್ಲಿ ಸಮಾರಂಭವು ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಪಿಎಎಫ್ಐ ಜನರಲ್ ಸೆಕ್ರೆಟರಿಯಾಗಿರುವ ಲಕ್ಷ್ಮಣ್ ಎಸ್. ಭಂಡಾರಿ, ಶಾಸಕ ವಿ. ಸುನಿಲ್ ಕುಮಾರ್, ಮುನಿಯಾಲು ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿರುವರು ಎಂದರು.

ಪಂಜಕುಸ್ತಿಯಲ್ಲಿ ಭಾಗವಹಿಸಿ ಬಹುಮಾನ ವಿಜೇತರಿಗೆ ಪ್ರಮಾಣಪತ್ರದ ಜೊತೆಗೆ 16 ಟ್ರೋಫಿ, ನಗದು ಬಹುಮಾನ ಮತ್ತು ಆಕರ್ಷಕ ಹೆಸರಿನ ಟ್ರೋಫಿಯನ್ನು ಚ್ಯಾಂಪಿಯನ್ ಆಫ್ ಚ್ಯಾಂಪಿಯನ್ನಿಗೆ ವಿತರಿಸಲಾಗುವದು. ಸಭೆಯಲ್ಲಿ ಜಿಲ್ಲಾ ಪಂಜ ಕುಸ್ತಿ ಸಂಘದ ಅಧ್ಯಕ್ಷ ಯೋಗೀಶ್ ಸಾಲ್ಯಾನ್, ಗೌರವಾಧ್ಯಕ್ಷ ಸೀತರಾಮ್ ಶೆಟ್ಟಿ ಕಾಬೆಟ್ಟು, ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕಾಬೆಟ್ಟು ಮತ್ತು ರಾಜೇಶ್ ರಾವ್, ಕಾರ್ಕಳ ಪಂಜ ಕುಸ್ತಿ ಸಂಘದ ಯುವರಾಜ್ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ರಾವ್, ಸಲಹಾ ಸಮಿತಿ ಸದಸ್ಯರಾದ ಜ್ಯೋತಿ ರಮೇಶ್, ಪ್ರಸಾದ್ ಐಸಿರ, ಮುರಳಿ ಶೆಟ್ಟಿ, ಅನಿಲ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ರಾಕೇಶ್ ಶೆಟ್ಟಿ, ಕೋಶಾಧಿಕಾರಿ ಹೇಮಚಂದ್ರ, ಪ್ರಶಾಂತ್ ಪೂಜಾರಿ, ರಂಜಿತ್





































