ಮಂಗಳೂರು : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದಮ್ಮಾಮ್ನಿಂದ ಆಗಮಿಸಿದ ಪ್ರಯಾಣಿಕನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 58,78,880 ರೂ. ಮೌಲ್ಯದ 812 ಗ್ರಾಂ ಚಿನ್ನವನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.
ಮೆಟಲ್ ಡಿಟೆಕ್ಟರ್ ಪರೀಕ್ಷೆ ಮಾಡುವಾಗ ಪ್ರಯಾಣಿಕನ ಸೊಂಟದಿಂದ ಬೀಪ್ ಹೊರಹೊಮ್ಮಿತು. ಹೆಚ್ಚಿನ ತಪಾಸಣೆಯ ನಂತರ, ಅಧಿಕಾರಿಗಳು ಪ್ರಯಾಣಿಕನ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿಕೊಂಡಿದ್ದನ್ನು ಪತ್ತೆಹಚ್ಚಿದರು.
ತಪಾಸಣೆಯಲ್ಲಿ 24-ಕ್ಯಾರಟ್ನ 812 ಗ್ರಾಂ ಚಿನ್ನ ಪತ್ತೆಯಾಗಿದೆ. ಮುಂದಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ 58.78 ಲ.ರೂ. ಚಿನ್ನ ವಶ





































