ರಾಮೇಶ್ವರಂ ಕೆಫೆ ಸ್ಫೋಟ : ಸೆರೆಯಾದ ಉಗ್ರ ಕಳಸದವ

ಬೆಂಗಳೂರು: ಬೆಂಗಳೂರು ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರನಿಗೆ ಸಹಾಯ ಮಾಡಿದವನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಮುಜಾಮಿಲ್​ ಷರೀಫ್ ಬಂಧಿತ ಆರೋಪಿ. ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದವನು. ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ತಾಯಿ ಹಾಗೂ ತಂಗಿ ಮತ್ತು ಪತ್ನಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತ್ನಿ 9 ತಿಂಗಳ ತುಂಬು ಗರ್ಭಿಣಿ. ಕಳೆದ 6 ತಿಂಗಳಿನಿಂದ ಅಯ್ಯಪ್ಪ ನಗರದಲ್ಲೇ ಇದ್ದ ಷರೀಫ್, ಒಂದು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾಗಿದ್ದ. ಬೆಂಗಳೂರಿನಲ್ಲಿ ಚಿಕನ್ ಕೌಂಟಿಯಲ್ಲಿ 16 ವರ್ಷದಿಂದ ಕೆಲಸ ಮಾಡುತ್ತಿದ್ದ.
ಹತ್ತಾರು ಟೆಕ್ನಿಕಲ್‌ ಎವಿಡೆನ್ಸ್‌ ಆಧಾರದಲ್ಲಿ ಎನ್‌ಐಎ ಬಾಂಬ್‌ ಸ್ಫೋಟಿಸಿದವನು ಮುಸಾವೀರ್‌ ಹುಸೇನ್ ಅನ್ನೋದನ್ನ ಪತ್ತೆ ಹಚ್ಚಿತ್ತು. ತೀರ್ಥಹಳ್ಳಿ ಮೂಲದ ಮುಸಾವೀರ್‌ ಬಾಂಬ್‌ ಸ್ಫೋಟಿಸಿದ್ರೆ, ಅಬ್ದುಲ್‌ ಮತೀನ್‌ ಕಿಂಗ್‌ಪಿನ್ ಆಗಿದ್ದ. ಇವರಿಬ್ಬರ ಪಾತ್ರದ ಬಗ್ಗೆ ಗೊತ್ತಾಗ್ತಿದ್ದಂತೆ ಬುಧವಾರ ಶಿವಮೊಗ್ಗದ ತೀರ್ಥಹಳ್ಳಿ, ಬೆಂಗಳೂರು ಹಾಗೂ ಚೆನ್ನೈ, ಉತ್ತರ ಪ್ರದೇಶದ ಸೇರಿದಂತೆ 18 ಕಡೆ ದಾಳಿ ಮಾಡಿದ್ದ ಎನ್‌ಐಎ ಶೋಧ ಮಾಡಿತ್ತು. ಈ ವೇಳೆ ಬಾಂಬ್‌ ತಯಾರಿಕೆಗೆ ಸಹಾಯ ಮಾಡಿದ್ದ ಮುಜಾಮಿಲ್‌ ಷರೀಫ್‌ ಎಂಬಾತನನ್ನ ಅರೆಸ್ಟ್‌ ಮಾಡಲಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇದುವರೆಗೂ ಹಲವರ ವಿಚಾರಣೆ ಆಗಿದ್ದರೂ ಯಾರನ್ನೂ ಅರೆಸ್ಟ್‌ ಮಾಡಿರಲಿಲ್ಲ. ಮುಜಾಮಿಲ್‌ ಷರೀಫ್‌ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾದ ಮೊದಲ ಆರೋಪಿ. ಬಾಂಬರ್‌ ಮುಸಾವೀರ್‌ ಹುಸೇನ್‌ ಹಾಗೂ ಕಿಂಗ್‌ಪಿನ್ ಅಬ್ದುಲ್‌ ಮತೀನ್‌ಗೆ ಮುಜಾಮಿಲ್ ಆಪ್ತನಾಗಿದ್ದ. ಬಾಂಬ್‌ ತಯಾರಿಕೆಗೆ ಈ ಮುಜಾಮಿಲ್‌ ಸ್ಫೋಟಕಗಳನ್ನ ಸರಬರಾಜು ಮಾಡಿದ್ದ ಎನ್ನಲಾಗಿದೆ.

















































error: Content is protected !!
Scroll to Top